AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್ ಸೇನೆ

Video: ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್ ಸೇನೆ

ನಯನಾ ರಾಜೀವ್
|

Updated on: May 12, 2025 | 10:13 AM

Share

ಪಾಕಿಸ್ತಾನ ಸೇನೆ(Pakistan Army)ಯು ಲಷ್ಕರ್​ ಉಗ್ರನನ್ನು ಮುಗ್ದ ಕುಟುಂಬದ ವ್ಯಕ್ತಿ ಧರ್ಮ ಪ್ರಚಾರಕ ಎಂದು ಕರೆದಿದ್ದಾರೆ. ಲಷ್ಕರ್​-ಎ-ತೊಯ್ಬಾದ ಭಯೋತ್ಪಾದಕನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನಾಧಿಕಾರಿ ಭಾಗಿಯಾಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಟೀಕೆಗಳನ್ನು ಕಡಿಮೆ ಮಾಡುವ ಸಲುವಾಗಿ ಪಾಕಿಸ್ತಾನ ಸೇನೆಯು ಆತನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಆತ ಉಗ್ರನಲ್ಲ ಎಂದು ಹೇಳಿದೆ.

ಇಸ್ಲಾಮಾಬಾದ್, ಮೇ 12: ಪಾಕಿಸ್ತಾನ ಸೇನೆ(Pakistan Army)ಯು ಲಷ್ಕರ್​ ಉಗ್ರನನ್ನು ಮುಗ್ದ ಕುಟುಂಬದ ವ್ಯಕ್ತಿ ಧರ್ಮ ಪ್ರಚಾರಕ ಎಂದು ಕರೆದಿದ್ದಾರೆ. ಲಷ್ಕರ್​-ಎ-ತೊಯ್ಬಾದ ಭಯೋತ್ಪಾದಕನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನಾಧಿಕಾರಿ ಭಾಗಿಯಾಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಟೀಕೆಗಳನ್ನು ಕಡಿಮೆ ಮಾಡುವ ಸಲುವಾಗಿ ಪಾಕಿಸ್ತಾನ ಸೇನೆಯು ಆತನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಆತ ಉಗ್ರನಲ್ಲ ಎಂದು ಹೇಳಿದೆ.

ಪಾಕಿಸ್ತಾನದ ಮಿಲಿಟರಿ ವಕ್ತಾರ ಡಿಜಿ ಐಎಸ್‌ಪಿಆರ್, ಆ ವ್ಯಕ್ತಿ ಕೇವಲ ಒಬ್ಬ ಮುಗ್ಧ ಕುಟುಂಬ ವ್ಯಕ್ತಿ ಮತ್ತು ಒಬ್ಬ ಧರ್ಮ ಪ್ರಚಾರಕ ಎಂದು ಹೇಳಿದ್ದಾರೆ. ಪಾಕಿಸ್ತಾನ ಸೇನೆ ಹಾಗೂ ಭಯೋತ್ಪಾದಕರೊಂದಿಗಿನ ಸಾಮೀಪ್ಯದ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದವು. ಪತ್ರಿಕಾಗೋಷ್ಠಿಯಲ್ಲಿ, ಆ ವ್ಯಕ್ತಿ ಪಕ್ಷದ ಸರಳ ಕಾರ್ಯಕರ್ತ ಎಂದು ಪ್ರತಿಪಾದಿಸಲು ಐಎಸ್​ಪಿಆರ್​ ಪಾಕಿಸ್ತಾನಿ ರಾಷ್ಟ್ರೀಯ ಗುರುತಿನ ಚೀಟಿಯನ್ನು ಸಹ ಪ್ರದರ್ಶಿಸಿತು.

ಆದಾಗ್ಯೂ, ಭಾರತೀಯ ಅಧಿಕಾರಿಗಳ ಪ್ರಕಾರ, ಅಧಿಕೃತ ದಾಖಲೆಗಳು ಸಂಪೂರ್ಣವಾಗಿ ವಿಭಿನ್ನವಾದ ಕಥೆಯನ್ನು ಹೇಳುತ್ತವೆ. ಆಪರೇಷನ್ ಸಿಂಧೂರ್ ಕುರಿತು ಉನ್ನತ ಮಟ್ಟದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಭಾರತ ನಡೆಸಿದ ಗಡಿಯಾಚೆಗಿನ ನಿಖರ ದಾಳಿಯಲ್ಲಿ ಹತರಾದ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಅಮೆರಿಕದಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಮತ್ತು ಎಲ್‌ಇಟಿ ಕಮಾಂಡರ್ ಹಫೀಜ್ ಅಬ್ದುಲ್ ರೌಫ್ ನೇತೃತ್ವ ವಹಿಸುತ್ತಿರುವ ಛಾಯಾಚಿತ್ರವನ್ನು ಕೂಡ ನೀಡಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ