ಕಣ್ಣೀರಿಡುತ್ತ ಹಣೆಗೆ ಮುತ್ತಿಟ್ಟು ಕಣ್ಣೀರಿಂದಲೇ ಅಣ್ಣನ ಪಾದ ತೊಳೆದ ರಾಕೇಶ್ ಪೂಜಾರಿ ಸಹೋದರಿ

ಅರುಣ್​ ಕುಮಾರ್​ ಬೆಳ್ಳಿ

Updated on: May 12, 2025 | 3:24 PM

ರಾಕೇಶ್ ಪೂಜಾರಿಯವರ ಅಂತಿಮ ದರ್ಶನಕ್ಕೆ ಸ್ನೇಹಿತರು, ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಅವರಿಗೆ ಜನಪ್ರಿಯತೆ ನೀಡಿದ್ದು ನಿಜವಾದರೂ ತಮ್ಮ ವಿಭಿನ್ನ ಪ್ರತಿಭೆ ಮೂಲಕ ರಾಕೇಶ್ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು. ಅಗಲಿದ ನಟನ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಸ್ವಗ್ರಾಮ ನಿಟ್ಟೆಯಲ್ಲಿ ನಡೆಯಲಿದೆ.

ಉಡುಪಿ, ಮೇ 12: ರಿಯಾಲಿಟಿ ಶೋ ವಿನ್ನರ್, ಸಿನಿಮಾ ಮತ್ತು ಕಿರುತೆರೆಯ ನಟನೂ (Sandalwood and TV actor) ಆಗಿದ್ದ ರಾಕೇಶ್ ಪೂಜಾರಿಯವರ ಅಕಾಲಿಕ ಸಾವು ಕನ್ನಡಿಗರನ್ನು ಶಾಕ್​ಗೀಡು ಮಾಡಿದ್ದು ಒಂದೆಡೆಯಾದರೆ, ಇದ್ದೊಬ್ಬ ಮಗನನ್ನು ಕಳೆದುಕೊಂಡ ತಾಯಿ ಮತ್ತು ಏಕೈಕ ಸಹೋದರನನ್ನು ಕಳೆದುಕೊಂಡು ರೋದಿಸುತ್ತಿರುವ ತಂಗಿಯ ದುಃಖಕ್ಕೆ ಎಣೆಯಿಲ್ಲ. ರಾಕೇಶ್ ಪೂಜಾರಿಯ ದೇಹವನ್ನು ಮನೆಯ ಬಳಿ ತಂದಾಗ ಸಹೋದರಿಯು ಅಗಲಿದ ಅಣ್ಣನ ಹಣೆಗೆ ಮುತ್ತಿಟ್ಟು ಅವರ ಪಾದಗಳನ್ನು ಅಕ್ಷರಶಃ ಕಣ್ಣೀರಿಂದ ತೊಳೆದರು. ಅಣ್ಣನ ಅಗಲಿಕೆ ಅವರನ್ನು ದಿಕ್ಕು ತೋಚದಂತೆ ಮಾಡಿದೆ. ಚಿತ್ರರಂಗದ ಅನೇಕ ಗಣ್ಯರು ರಾಕೇಶ್ ಸಾವಿಗೆ ಕಂಬನಿ ಮಿಡಿಯುತ್ತಾ ಆಘಾತ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:  ರಾಕೇಶ್ ಪೂಜಾರಿಗೆ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: May 12, 2025 03:18 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.