ಅಪ್ಪ ಬುಲೆಟ್ ಪ್ರಕಾಶ್​ರ ಕೊನೆಯ ಸಿನಿಮಾ ಬಗ್ಗೆ ರಕ್ಷಕ್ ಮಾತು

Updated on: Feb 24, 2024 | 10:57 PM

Bullet Prakash: ನಟ ಬುಲೆಟ್ ಪ್ರಕಾಶ್ ನಟಿಸಿದ ಕೊನೆಯ ಸಿನಿಮಾ ‘ಮೆಹಬೂಬ’ ಬಗ್ಗೆ ಅವರ ಪುತ್ರ ರಕ್ಷಕ್ ಮಾತನಾಡಿದ್ದು ಹೀಗೆ. ಮೆಹಬೂಬ ಸಿನಿಮಾದಲ್ಲಿ ಮಾಜಿ ಬಿಗ್​ಬಾಸ್ ವಿನ್ನರ್ ಶಶಿ ನಾಯಕ.

ಬುಲೆಟ್ ಪ್ರಕಾಶ್ (Bullet Prakash) ಪುತ್ರ ರಕ್ಷಕ್ (Rakshak) ನಟನಾಗಿ ಜನಪ್ರಿಯರಾಗಿರುವ ಜೊತೆಗೆ ಸಾಮಾಜಿಕ ಜಾಲತಾಣದಿಂದಲೂ ಬಹಳ ಫೇಮಸ್ ಆಗಿದ್ದಾರೆ. ಇತ್ತೀಚೆಗಷ್ಟೆ ಬಿಗ್​ಬಾಸ್​ಗೂ ಹೋಗಿ ಬಂದಿರುವ ರಕ್ಷಕ್​ರ ವರ್ಚಸ್ಸು ಇನ್ನಷ್ಟು ಹೆಚ್ಚಿದೆ. ಇದೀಗ ಬಿಗ್​ಬಾಸ್ ಕನ್ನಡ ಸೀಸನ್​ 10ರ ಹಲವು ಸ್ಪರ್ಧಿಗಳು ಒಂದೇ ವೇದಿಕೆಯಲ್ಲಿ ಸೇರಿದ್ದರು, ಅದಕ್ಕೆ ಕಾರಣವಾಗಿದ್ದು ಮಾಜಿ ಬಿಗ್​ಬಾಸ್ ವಿನ್ನರ್ ಶಶಿ ಅವರಿಗಾಗಿ. ಶಶಿ ನಟಿಸಿರುವ ‘ಮೆಹಬೂಬ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಈ ಸಿನಿಮಾ ರಕ್ಷಕ್​ರ ತಂದೆ ಬುಲೆಟ್ ಪ್ರಕಾಶ್ ನಟನೆಯ ಕೊನೆಯ ಸಿನಿಮಾ ಸಹ ಹೌದಂತೆ. ತಮ್ಮ ತಂದೆಯ ಕೊನೆಯ ಸಿನಿಮಾ ಬಗ್ಗೆ ರಕ್ಷಕ್ ಮಾತನಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More