AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಪಮ ಥೇಟರ್ ಮುಂದೆ ಕಟ್ಟಿದ್ದ ‘ಆರ್ ಆರ್ ಆರ್’ ಸಿನಿಮಾ ಪೋಸ್ಟರ್​ಗಳನ್ನು ಕರವೇ ಕಾರ್ಯಕರ್ತರು ಕಿತ್ತು ಹಾಕಿದರು

ಅನುಪಮ ಥೇಟರ್ ಮುಂದೆ ಕಟ್ಟಿದ್ದ ‘ಆರ್ ಆರ್ ಆರ್’ ಸಿನಿಮಾ ಪೋಸ್ಟರ್​ಗಳನ್ನು ಕರವೇ ಕಾರ್ಯಕರ್ತರು ಕಿತ್ತು ಹಾಕಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 24, 2022 | 9:20 PM

ಥೇಟರ್ ಪ್ರತಿನಿಧಿ ‘ಜೇಮ್ಸ್’ ಚಿತ್ರವನ್ನು ತೆಗೆಯುವುದಿಲ್ಲ ಎಂಬ ಆಶ್ವಾಸವೆಯನ್ನು ಕ ರ ವೇ ಕಾರ್ಯಕರ್ತರಿಗೆ ನೀಡುತ್ತಾರೆ. ಶೆಟ್ಟಿ ಆ ಮಾತನ್ನು ಎರಡೆರಡು ಬಾರಿ ಕೇಳಿ ಖಚಿತಪಡಿಸಿಕೊಳ್ಳುತ್ತಾರೆ.

ಬೆಂಗಳೂರು: ಕನ್ನಡ ಭಾಷೆ, ನೆಲ ಮತ್ತು ಜಲದ ಸಮಸ್ಯೆ ಎದುರಾದಾಗ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ನಿಂತುಬಿಡುತ್ತವೆ. ಗುರುವಾರ ಬೆಂಗಳೂರು ನಗರದಲ್ಲಿ ನಡೆದಿದ್ದು ಅದೇ. ‘ಜೇಮ್ಸ್’ (‘James’) ಚಿತ್ರವನ್ನು ತೆಗೆದು ಚಂದ್ರಮೌಳಿ (Chandramouli) ನಿರ್ದೇಶನ ‘ಆರ್ ಆರ್ ಆರ್’ (‘RRR’) ತೆಲುಗು ಸಿನಿಮಾ ಪ್ರದರ್ಶಿಸಲು ಚಿತ್ರಮಂದಿರದ ಮಾಲೀಕರು ಮುಂದಾಗಿದ್ದಾರೆ. ನಿಮಗೆ ವಿಡಿಯೋನಲ್ಲಿ ಕಾಣುತ್ತಿರೋದು ಅನುಪಮಾ ಥೇಟರ್ (Anupama Theatre). ಇಲ್ಲಿ ‘ಜೇಮ್ಸ್’ ಚಿತ್ರ ಯಶಸ್ವೀಯಾಗಿ ಓಡುತ್ತಿದೆ. ಆದರೆ, ಥೇಟರ್ ಮಾಲೀಕರು ಅದನ್ನು ಬದಲಾಯಿಸಿ ‘ಆರ್ ಆರ್ ಆರ್’ ಚಿತ್ರವನ್ನು ಪ್ರದರ್ಶಿಸುವ ನಿರ್ಧಾರ ಮಾಡಿದ್ದಾರೆ ಮತ್ತು ಭಾರಿ ಗಾತ್ರದ ಪೋಸ್ಟರ್ ಗಳನ್ನು ಸಹ ಕಟ್ಟಿಸಿದ್ದಾರೆ. ವಿಷಯ ತಿಳಿದ ನಂತರ ಅಲ್ಲಿಗೆ ತೆರಳಿದ ಕನ್ನಡ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಕಿತ್ತು ಹಾಕಿ ಥೇಟರ್ ಮುಂದೆ ಪ್ರತಿಭಟನೆಗೆ ಕುಳಿತರು.

ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವಿಷಯ ಪೊಲೀಸರಿಗೆ ಗೊತ್ತಾದಾಗ ಅಲ್ಲಿಗೆ ಬಂದು ಅದನ್ನು ನಿಲ್ಲಿಸುವಂತೆ ಮನವಿ ಮಾಡುತ್ತಾರೆ. ಒಬ್ಬ ಪೊಲೀಸ್ ಅಧಿಕಾರಿ ಪ್ರವೀಣ್ ಶೆಟ್ಟಿ ಅವರೊಂದಿಗೆ ಮಾತಾಡುವುದು ನಿಮಗೆ ವಿಡಿಯೋನಲ್ಲಿ ಕಾಣುತ್ತದೆ. ಅವರ ನಡುವೆ ಏನು ಮಾತುಕತೆ ನಡೆಯಿತೆಂದು ಗೊತ್ತಾಗುವುದಿಲ್ಲ.

ಪೊಲೀಸ್ ಅಧಿಕಾರಿ ಅಲ್ಲಿಂದ ಹೋದ ಕೂಡಲೇ ಚಿತ್ರಮಂದಿರಕ್ಕೆ ಸಂಬಂಧಪಟ್ಟವರು ಅಲ್ಲಿಗೆ ಬರುತ್ತಾರೆ. ಅವರ ನಡುವೆ ನಡೆಯುವ ಸಂಭಾಷಣೆಯ ಕೆಲ ಮಾತುಗಳು ಕೇಳಿಸುತ್ತವೆ. ಥೇಟರ್ ಪ್ರತಿನಿಧಿ ‘ಜೇಮ್ಸ್’ ಚಿತ್ರವನ್ನು ತೆಗೆಯುವುದಿಲ್ಲ ಎಂಬ ಆಶ್ವಾಸವೆಯನ್ನು ಕ ರ ವೇ ಕಾರ್ಯಕರ್ತರಿಗೆ ನೀಡುತ್ತಾರೆ. ಶೆಟ್ಟಿ ಆ ಮಾತನ್ನು ಎರಡೆರಡು ಬಾರಿ ಕೇಳಿ ಖಚಿತಪಡಿಸಿಕೊಳ್ಳುತ್ತಾರೆ.

‘ಜೇಮ್ಸ್’ ಚಿತ್ರದ ಪ್ರದರ್ಶನ ಅನುಪಮಾ ಥೇಟರ್ ನಿಲ್ಲಿಸುವುದಿಲ್ಲ ಅಂತ ಖಾತ್ರಿಯಾದ ಮೇಲೆ ಪ್ರವೀಣ್ ಶೆಟ್ಟಿ ಅವರು ಪ್ರತಿಭಟನೆ ನಿಲ್ಲಿಸಿ ತಮ್ಮ ಕಾರ್ಯಕರ್ತರನ್ನು ಅಲ್ಲಿಂದ ಕರೆದೊಯ್ಯುತ್ತಾರೆ.

ಇದನ್ನೂ ಓದಿ:  ಪ್ರಿಯಕರನ ಜತೆ ಇದ್ದಾಗಲೂ ‘ಆರ್​ಆರ್​ಆರ್​’ ಪ್ರಚಾರ ಮಾಡಿದ ನಟಿ ಆಲಿಯಾ ಭಟ್​; ವಿಡಿಯೋ ವೈರಲ್​