AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯೂಸಿಯಾಗಿದ್ದರೂ ಮಹಿಳಾ ಅಭಿಮಾನಿಯೊಬ್ಬರಿಗೆ ಸೆಲ್ಫೀ ತೆಗೆದುಕೊಳ್ಳಲು ಸಮಯ ನೀಡಿದರು ಶಿವಣ್ಣ!

ಬ್ಯೂಸಿಯಾಗಿದ್ದರೂ ಮಹಿಳಾ ಅಭಿಮಾನಿಯೊಬ್ಬರಿಗೆ ಸೆಲ್ಫೀ ತೆಗೆದುಕೊಳ್ಳಲು ಸಮಯ ನೀಡಿದರು ಶಿವಣ್ಣ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Mar 24, 2022 | 7:57 PM

Share

ಅಷ್ಟರಲ್ಲಿ ಮಹಿಳಾ ಯುವ ಅಭಿಮಾನಿ ಸರ್ ಸರ್ ಅನ್ನುತ್ತಾ ಓಡಿಬರುತ್ತಾರೆ. ತಮ್ಮ ನೆಚ್ಚಿನ ನಟನೊಂದಿಗೆ ಅವರಿಗೆ ಸೆಲ್ಫೀ ಬೇಕಾಗಿದೆ. ಅಗಲೇ ಹೇಳಿದಂತೆ ಶಿವಣ್ಣ ಭಯಂಕರ ಬ್ಯೂಸಿಯಾಗಿದ್ದರೂ ಯುವತಿಗೆ ಸೆಲ್ಪೀ ತೆಗೆದುಕೊಳ್ಳಲು ಸಮಯ ನೀಡುತ್ತಾರೆ.

ಡಾ ರಾಜಕುಮಾರ್ (Dr Rajkumar) ತಮ್ಮ ಅಭಿಮಾನಿಗಳನ್ನೇ ದೇವರು ಅನ್ನುತ್ತಿದ್ದರು. ಅವರ ಮಕ್ಕಳು-ಶಿವರಾಜಕುಮಾರ್ (Shiva Rajkumar), ರಾಘವೇಂದ್ರ ರಾಜಕುಮಾರ್ (Raghavendra Rajkumar) ಮತ್ತು ದಿವಂಗತ ಡಾ ಪುನೀತ್ ರಾಜಕುಮಾರ (Dr Puneeth Rajkumar) ಸಹ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಎಲ್ಲರಿಗೂ ಕೊಟ್ಯಾಂತರ ಅಭಿಮಾನಿಗಳಿದ್ದಾರೆ. ಗುರುವಾರದಂದು ಶಿವಣ್ಣ ಅವರು ಬಹಳ ಬ್ಯೂಸಿಯಾಗಿದ್ದರು. ‘ಆರ್ ಆರ್ ಅರ್’ ಚಿತ್ರದ ಪ್ರದರ್ಶನಕ್ಕಾಗಿ ಕೆಲ ಥೇಟರ್ ಮತ್ತು ಮಲ್ಟಿಪ್ಲೆಕ್ಸ್ ಗಳು ಯಶಸ್ವೀಯಾಗಿ ಓಡುತ್ತಿರುವ ಪುನೀತ್ ರಾಜಕುಮಾರ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್’ ಬದಲಾಯಿಸುವ ಯತ್ನದಲ್ಲಿದ್ದಾರೆ. ಇದು ಸಹಜವಾಗೇ ಶಿವಣ್ಣ ಮತ್ತು ಎಲ್ಲ ಕನ್ನಡಿಗರಿಗೆ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಶಿವಣ್ಣ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದರು ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳೊಂದಿಗೆ ವಿಷಯವನ್ನು ಪ್ರಸ್ತಾಪಿಸಿದರು.

ಶಿವಣ್ಣ ಫಿಲ್ಮ್ ಚೇಂಬರ್ ನಿಂದ ಹೊರಬಂದಾಗ ಎಂದಿನಂತೆ ಅಭಿಮಾನಿಗಳು ಅವರಿಗಾಗಿ ಕಾಯುತ್ತಿದ್ದರು. ಅವರು ಮತ್ತೆಲ್ಲಿಗೋ ಹೋಗುವ ಧಾವಂತ ತೋರುತ್ತಾರೆ. ಆದರೆ, ಅಷ್ಟರಲ್ಲಿ ಮಹಿಳಾ ಯುವ ಅಭಿಮಾನಿ ಸರ್ ಸರ್ ಅನ್ನುತ್ತಾ ಓಡಿಬರುತ್ತಾರೆ. ತಮ್ಮ ನೆಚ್ಚಿನ ನಟನೊಂದಿಗೆ ಅವರಿಗೆ ಸೆಲ್ಫೀ ಬೇಕಾಗಿದೆ. ಅಗಲೇ ಹೇಳಿದಂತೆ ಶಿವಣ್ಣ ಭಯಂಕರ ಬ್ಯೂಸಿಯಾಗಿದ್ದರೂ ಯುವತಿಗೆ ಸೆಲ್ಪೀ ತೆಗೆದುಕೊಳ್ಳಲು ಸಮಯ ನೀಡುತ್ತಾರೆ.

ಆದರೆ, ತನ್ನ ಆರಾಧ್ಯ ದೈವನನ್ನು ಭೇಟಿಯಾಗಿ ಸೆಲ್ಫೀ ತೆಗೆದುಕೊಳ್ಳುವ ಖುಷಿ ಮತ್ತು ರೋಮಾಂಚನದಲ್ಲಿ ಯುವತಿ ತಮ್ಮ ಫೋನ್ ಆಪರೇಟ್ ಮಾಡಲು ತಡವರಿಸಿದಾಗ ಶಿವಣ್ಣನೇ ಸಹಾಯ ಮಾಡಲು ಮುಂದಾಗುತ್ತಾರೆ. ಅವರಿಗೂ ಗೊಂದಲ ಉಂಟಾದ ಹಾಗೆ ಕಾಣುತ್ತದೆ. ಎಲ್ಲ ಪೋನ್ ಗಳ ಆಪರೇಟಿಂಗ್ ವಿಧಾನ ಏಕರೂಪವಾಗಿರಲ್ಲ. ಆಗ ಇನ್ನೊಬ್ಬ ವ್ಯಕ್ತಿ, ಪ್ರಾಯಶಃ ಶಿವಣ್ಣನವರ ಅಂಗರಕ್ಷಕ ಇರಬಹುದು-ಯುವತಿ ಸೆಲ್ಫೀ ತೆಗೆದುಕೊಳ್ಳಲು ನೆರವಾಗುತ್ತಾರೆ.

ಇದನ್ನೂ ಓದಿ:  James Box Office Collection: ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆ ಬರೆದ ‘ಜೇಮ್ಸ್’; ಅಪ್ಪು ಶತಕದ ಸರದಾರ