ರಕ್ಷಿತ್​ ಶೆಟ್ಟಿಗೆ ಹೊಳೆಯಲೇ ಇಲ್ಲ ರಶ್ಮಿಕಾ ಮಂದಣ್ಣ ಹೆಸರು; ಇಲ್ಲಿದೆ ಫನ್ನಿ ವಿಡಿಯೋ

|

Updated on: Aug 28, 2023 | 9:38 PM

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ರಿಲೀಸ್​ ಪ್ರಯುಕ್ತ ‘ಟಿವಿ9 ಕನ್ನಡ’ ನಡೆಸಿದ ವಿಶೇಷ ಸಂದರ್ಶನದಲ್ಲಿ ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್​ ಅವರು ಭಾಗವಹಿಸಿದ್ದಾರೆ. ಈ ವೇಳೆ ಅವರಿಗೆ ಹಲವು ಪ್ರಶ್ನೆಗಳು ಎದುರಾಗಿವೆ. ಒಂದು ಪ್ರಶ್ನೆಗೆ ಉತ್ತರವಾಗಿ ರಶ್ಮಿಕಾ ಮಂದಣ್ಣ ಅವರ ಹೆಸರನ್ನು ರಕ್ಷಿತ್​ ಶೆಟ್ಟಿ ಊಹಿಸಬೇಕಿತ್ತು. ಆ ಕ್ಷಣ ಹೇಗಿತ್ತು ನೋಡಿ..

ನಟ ರಕ್ಷಿತ್​ ಶೆಟ್ಟಿ ಅವರು ಈಗ ‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradaache Ello) ಸಿನಿಮಾದ ಬಿಡುಗಡೆಗೆ ಕಾದಿದ್ದಾರೆ. ಸೆಪ್ಟೆಂಬರ್​ 1ರಂದು ಈ ಚಿತ್ರ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ನಟಿ ರುಕ್ಮಿಣಿ ವಸಂತ್​ ಅವರು ರಕ್ಷಿತ್​ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ. ಎರಡು ಪಾರ್ಟ್​ನಲ್ಲಿ ಈ ಚಿತ್ರ ಮೂಡಿಬಂದಿದೆ. ಹೇಮಂತ್​ ರಾವ್​ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ರಿಲೀಸ್​ ಪ್ರಯುಕ್ತ ‘ಟಿವಿ9 ಕನ್ನಡ’ ನಡೆಸಿದ ವಿಶೇಷ ಸಂದರ್ಶನದಲ್ಲಿ ರಕ್ಷಿತ್​ ಶೆಟ್ಟಿ (Rakshit Shetty) ಮತ್ತು ರುಕ್ಮಿಣಿ ವಸಂತ್​ ಅವರು ಭಾಗವಹಿಸಿದ್ದಾರೆ. ಈ ವೇಳೆ ಅವರಿಗೆ ಹಲವು ಪ್ರಶ್ನೆಗಳು ಎದುರಾದವು. ಒಂದು ಪ್ರಶ್ನೆಗೆ ಉತ್ತರವಾಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಹೆಸರನ್ನು ರಕ್ಷಿತ್​ ಶೆಟ್ಟಿ ಊಹಿಸಬೇಕಿತ್ತು. ಆ ಕ್ಷಣದಲ್ಲಿ ಅವರಿಗೆ ಆ ಹೆಸರು ಹೊಳೆಯಲೇ ಇಲ್ಲ. ಫನ್ನಿ ಕ್ಷಣದ ವಿಡಿಯೋ ಹೇಗಿದೆ ನೋಡಿ..

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.