ರಕ್ಷಿತ್ ಶೆಟ್ಟಿಗೆ ತೆಲುಗಿನಲ್ಲಿ ತುಂಬಾ ಫ್ಯಾನ್ಸ್ ಇದ್ದಾರೆ ಎಂದ ಅಡಿವಿ ಶೇಷ್

| Updated By: ರಾಜೇಶ್ ದುಗ್ಗುಮನೆ

Updated on: Dec 01, 2022 | 9:10 AM

ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಅಂದರೆ ಅವರಿಗೆ ಇಷ್ಟವಂತೆ. ಅವರ ಜತೆ ಸಿನಿಮಾ ಮಾಡಬೇಕು ಎಂಬ ಇಚ್ಛೆಯನ್ನು ಅಡಿವಿ ಶೇಷ್ ವ್ಯಕ್ತಪಡಿಸಿದ್ದಾರೆ.

ನಟ ಅಡಿವಿ ಶೇಷ್ (Adivi Sesh)  ಅವರು ತೆಲುಗಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ಅವರ ನಟನೆಯ ‘ಹಿಟ್ 2’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಪ್ರಚಾರಕ್ಕಾಗಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಟಿವಿ9 ಕನ್ನಡದ ಜತೆಗೆ ತಮ್ಮ ಜರ್ನಿ ಬಗ್ಗೆ ಅಡಿವಿ ಶೇಷ್ ಮಾಹಿತಿ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ (Rakshit Shetty) ಅಂದರೆ ಅವರಿಗೆ ಇಷ್ಟವಂತೆ. ಅವರ ಜತೆ ಸಿನಿಮಾ ಮಾಡಬೇಕು ಎಂಬ ಇಚ್ಛೆಯನ್ನು ಅಡಿವಿ ಶೇಷ್ ವ್ಯಕ್ತಪಡಿಸಿದ್ದಾರೆ. ತೆಲುಗಿನಲ್ಲಿ ರಕ್ಷಿತ್​ಗೆ ದೊಡ್ಡ ಅಭಿಮಾನಿ ಬಳಗ ಇರುವ ವಿಚಾರವನ್ನು ಅವರು ರಿವೀಲ್ ಮಾಡಿದ್ದಾರೆ.