‘ನನಗೆ ಸ್ಟ್ಯಾಮಿನಾ ಜಾಸ್ತಿ’; ಪುರುಷರ ಲೈಂಗಿಕ ಸಾಮರ್ಥ್ಯ ಟೀಕೆ ಮಾಡಿದ್ದ ನಟಿ ರೆಜಿನಾಗೆ ಸ್ಟಾರ್ ನಟನ ತಿರುಗೇಟು

ರೆಜಿನಾ ಹಾಗೂ ನಿವೇದಾ ಥಾಮಸ್ ಅವರು ‘ಶಾಕಿನಿ ಡಾಕಿನಿ’ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಸುಧೀರ್ ವರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಪ್ರಚಾರದ ವೇಳೆ ರೆಜಿನಾ ಡಬಲ್ ಮೀನಿಂಗ್ ಜೋಕ್ ಹೇಳಿದ್ದರು.

‘ನನಗೆ ಸ್ಟ್ಯಾಮಿನಾ ಜಾಸ್ತಿ’; ಪುರುಷರ ಲೈಂಗಿಕ ಸಾಮರ್ಥ್ಯ ಟೀಕೆ ಮಾಡಿದ್ದ ನಟಿ ರೆಜಿನಾಗೆ ಸ್ಟಾರ್ ನಟನ ತಿರುಗೇಟು
ರೆಜಿನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 13, 2022 | 10:13 PM

ಸೆಲೆಬ್ರಿಟಿಗಳು ನೀಡುವ ಹೇಳಿಕೆ ಸಾಕಷ್ಟು ಚರ್ಚೆ ಆಗುತ್ತದೆ. ಅದರಲ್ಲೂ ಕಾಂಟ್ರವರ್ಸಿ ಹೇಳಿಕೆ ನೀಡಿದರೆ ಆ ಬಗ್ಗೆ ಪರ ವಿರೋಧ ಚರ್ಚೆ ದೊಡ್ಡಮಟ್ಟದಲ್ಲೇ ನಡೆಯುತ್ತದೆ. ಇತ್ತೀಚೆಗೆ ನಟಿ ರೆಜಿನಾ ಕ್ಯಾಸಂಡ್ರಾ (Regina Cassandra) ಅವರು ಪುರುಷರ ಲೈಂಗಿಕ ಸಾಮರ್ಥ್ಯದ ಬಗ್ಗೆ ಜೋಕ್ ಮಾಡಿದ್ದರು. ಅವರ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈಗ ಈ ಹೇಳಿಕೆಗೆ ನಟ ಅಡಿವಿ ಶೇಷ್ (Adavi Sesh) ಅವರು ತಿರುಗೇಟು ನೀಡಿದ್ದಾರೆ. ಈ ಹೇಳಿಕೆ ಸಾಕಷ್ಟು ವೈರಲ್ ಆಗುತ್ತಿದೆ.

ರೆಜಿನಾ ಹಾಗೂ ನಿವೇದಾ ಥಾಮಸ್ ಅವರು ‘ಶಾಕಿನಿ ಡಾಕಿನಿ’ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಸುಧೀರ್ ವರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಪ್ರಚಾರದ ವೇಳೆ ರೆಜಿನಾ ಡಬಲ್ ಮೀನಿಂಗ್ ಜೋಕ್ ಹೇಳಿದ್ದರು. ‘ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ, ಎರಡೇ ನಿಮಿಷದಲ್ಲಿ ಆಗಿ ಹೋಗುತ್ತದೆ’ ಎಂದು ಹೇಳಿಕೊಂಡು ನಕ್ಕಿದ್ದರು ರೆಜಿನಾ. ಇದಕ್ಕೆ ಅಡಿವಿ ಶೇಷ್ ಫನ್ನಿ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ‘ಶಾಕಿನಿ ಡಾಕಿನಿ’ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ಈ ಕಾರ್ಯಕ್ರಮಕ್ಕೆ ಅಡಿವಿ ಶೇಷ್​ ಅತಿಥಿಯಾಗಿ ಬಂದಿದ್ದರು. ಹೀಗಾಗಿ, ರೆಜಿನಾ ಹಾಗೂ ಅಡಿವಿ ಶೇಷ್ ಅವರು ಒಂದೇ ವೇದಿಕೆ ಮೇಲಿದ್ದರು. ಈ ಸಮಯವನ್ನು ಅಡಿವಿ ಶೇಷ್ ಅವರು ಬಿಟ್ಟುಕೊಂಡಿಲ್ಲ. ಅವರು ಫನ್ನಿಯಾಗಿಯೇ ತಿರುಗೇಟು ನೀಡಿದ್ದಾರೆ. ‘ರೆಜಿನಾ ನೀವು ಇತ್ತೀಚೆಗೆ ಮ್ಯಾಗಿ ಮತ್ತು ಪುರುಷರ ಬಗ್ಗೆ ಒಂದು ಹೇಳಿಕೆ ನೀಡಿದ್ದಿರಿ. ಇದು ನನ್ನ ಗಮನಕ್ಕೆ ಬಂದಿದೆ. ಏನದು ವಿಚಾರ? ನಾನು ಬಹಳ ದಿನ ಸಿನಿಮಾ ಮಾಡುತ್ತೇನೆ, ಏಕೆಂದರೆ ನನಗೆ ಸ್ಟ್ಯಾಮಿನಾ ಜಾಸ್ತಿ. ಮ್ಯಾಗಿ ವಿಚಾರ ಹೇಳುವಾಗ ನಿಮ್ಮ ಉದ್ದೇಶ ಏನಾಗಿತ್ತು’ ಎಂದು ರೆಜಿನಾ ಕಾಲೆಳೆದಿದ್ದಾರೆ ಅಡಿವಿ ಶೇಷ್.

ಇದನ್ನೂ ಓದಿ
Image
ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
Image
BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​
Image
ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
Image
‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

ಅಡಿವಿ ಶೇಷ್ ಅವರು ಈ ರೀತಿ ಹೇಳುತ್ತಾರೆ ಎಂದು ರೆಜಿನಾ ಊಹಿಸಿರಲಿಲ್ಲ. ಹೀಗಾಗಿ, ಅವರು ಕೊಂಚ ಗಲಿಬಿಲಿಗೊಂಡಂತೆ ಕಂಡುಬಂತು. ಇದಕ್ಕೆ ರೆಜಿನಾ ಅವರು ಮುಂದಿನ ದಿನಗಳಲ್ಲಿ ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ ಕೇವಲ ಎರಡು ನಿಮಿಷ’; ಸ್ಟಾರ್​ ನಟಿಯ ಹೇಳಿಕೆಗೆ ಟೀಕೆ

ರೆಜಿನಾ ಅವರು ಕನ್ನಡದಲ್ಲೂ ನಟಿಸಿದ್ದಾರೆ. 2010ರಲ್ಲಿ ಅವರು ಕನ್ನಡದ ‘ಸೂರ್ಯಕಾಂತಿ’ ಸಿನಿಮಾದಲ್ಲಿ ನಟಿಸಿದ್ದರು. ಚೇತನ್ ಕುಮಾರ್ ಈ ಚಿತ್ರಕ್ಕೆ ಹೀರೋ. ಆ ಬಳಿಕ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆದರು.

Published On - 9:58 pm, Tue, 13 September 22