AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ ಕೇವಲ ಎರಡು ನಿಮಿಷ’; ಸ್ಟಾರ್​ ನಟಿಯ ಹೇಳಿಕೆಗೆ ಟೀಕೆ

ರೆಜಿನಾ ಹಾಗೂ ನಿವೇದಾ ಥಾಮಸ್ ಅವರು ‘ಸಾಕಿನಿ ಧಾಕಿನಿ’ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಇತ್ತೀಚೆಗೆ ಒಂದು ಮಾಧ್ಯಮಕ್ಕೆ ಸಂದರ್ಶನ ನೀಡುವಾಗ ರೆಜಿನಾ ಡಬಲ್ ಮೀನಿಂಗ್ ಜೋಕ್ ಹೇಳಿದ್ದಾರೆ.  

‘ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ ಕೇವಲ ಎರಡು ನಿಮಿಷ’; ಸ್ಟಾರ್​ ನಟಿಯ ಹೇಳಿಕೆಗೆ ಟೀಕೆ
ರೆಜಿನಾ
TV9 Web
| Edited By: |

Updated on:Sep 13, 2022 | 9:38 PM

Share

ಸೆಲೆಬ್ರಿಟಿಗಳು ನೀಡುವ ಹೇಳಿಕೆ ಕೆಲವೊಮ್ಮೆ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿ ಬಿಡುತ್ತದೆ. ಕೆಲವೊಂದು ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದ ಉದಾಹರಣೆ ಕೂಡ ಇದೆ. ಆದರೆ, ಕೆಲವು ನಟಿಯರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಮಗೆ ಏನು ಹೇಳಬೇಕು ಅನಿಸುತ್ತದೆಯೋ ಅದನ್ನೇ ಹೇಳುತ್ತಾರೆ. ಈಗ ನಟಿ ರೆಜಿನಾ ಕ್ಯಾಸಂಡ್ರಾ (Regina Cassandra) ನೀಡಿದ ಹೇಳಿಕೆ ಚರ್ಚೆ ಹುಟ್ಟು ಹಾಕಿದೆ. ಪುರುಷರ ಲೈಂಗಿಕ ಸಾಮರ್ಥ್ಯದ ಬಗ್ಗೆ ಅವರು ಜೋಕ್ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಆಗುತ್ತಿದೆ.

ರೆಜಿನಾ ಹಾಗೂ ನಿವೇದಾ ಥಾಮಸ್ ಅವರು ‘ಶಾಕಿನಿ ಡಾಕಿನಿ’ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಸುಧೀರ್ ವರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಸದ್ಯ ಇಬ್ಬರೂ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಒಂದು ಮಾಧ್ಯಮಕ್ಕೆ ಸಂದರ್ಶನ ನೀಡುವಾಗ ರೆಜಿನಾ ಡಬಲ್ ಮೀನಿಂಗ್ ಜೋಕ್ ಹೇಳಿದ್ದಾರೆ.

ಹುಡುಗರ ಲೈಂಗಿಕ ಸಾಮರ್ಥ್ಯವನ್ನು ಅವರು ಮ್ಯಾಗಿಗೆ ಹೋಲಿಕೆ ಮಾಡಿದ್ದಾರೆ. ‘ಹುಡುಗರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ. ಆದರೆ, ಅದನ್ನು ಹೇಳಬೇಕೋ ಅಥವಾ ಬೇಡವೋ ಎಂಬುದು ತಿಳಿಯುತ್ತಿಲ್ಲ’ ಎಂದು ಕೆಲ ಕಾಲ ಯೋಚಿಸಿದರು ಅವರು. ನಂತರ ಹೇಳಿಯೇ ಬಿಟ್ಟರು. ‘ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ, ಎರಡೇ ನಿಮಿಷದಲ್ಲಿ ಆಗಿ ಹೋಗುತ್ತದೆ’ ಎಂದು ನಕ್ಕರು. ಈ ಮಾತನ್ನು ಕೇಳಿ ಅಲ್ಲಿದ್ದವರೂ ನಕ್ಕರು. ಸದ್ಯ ಈ ಜೋಕ್​ಗೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ‘ನಿಮಗೆ ಹೇಗೆ ಗೊತ್ತು’ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪ್ರಶ್ನೆ ಮಾಡಿದ್ದಾರೆ.

‘ಸಾಕಿನಿ ಧಾಕಿನಿ’ ಕೊರಿಯನ್ ಸಿನಿಮಾ ‘ಮಿಡ್​ನೈಟ್​ ರನ್ನರ್ಸ್​’ನಿಂದ ಸ್ಫೂರ್ತಿ ಪಡೆದು ಮಾಡಲಾಗಿದೆ. ಪೋಲಿಸ್ ಅಕಾಡೆಮಿಯ ಇಬ್ಬರು ವಿದ್ಯಾರ್ಥಿಗಳು ಮಾನವ ಕಳ್ಳ ಸಾಗಣೆಯನ್ನು ಬಯಲಿಗೆ ಎಳೆಯುತ್ತಾರೆ ಅನ್ನೋದು ಕಥೆ. ಈ ಸಿನಿಮಾ 2017ರಲ್ಲಿ ತೆರೆಗೆ ಬಂದಿತ್ತು. ಮೂಲ ಸಿನಿಮಾದಲ್ಲಿ ಇಬ್ಬರು ನಟರನ್ನು ಹಾಕಿಕೊಂಡು ಸಿನಿಮಾ ಮಾಡಲಾಗಿತ್ತು. ಆದರೆ, ಇಲ್ಲಿ ಇಬ್ಬರು ನಟಿಯರನ್ನು ಹಾಕಿಕೊಂಡು ಸಿನಿಮಾ ಮಾಡಲಾಗುತ್ತಿದೆ.

ಇದನ್ನೂ ಓದಿ: ಪತ್ನಿ ಬಗ್ಗೆ ಜೋಕ್​ ಮಾಡಿದ್ದಕ್ಕೆ ಆಸ್ಕರ್​ ವೇದಿಕೆ ಮೇಲೆ ನಟನ ಕೆನ್ನೆಗೆ ಬಾರಿಸಿದ ವಿಲ್​ ಸ್ಮಿತ್​; ವಿಡಿಯೋ ವೈರಲ್​

ರೆಜಿನಾ ಅವರು ಕನ್ನಡದಲ್ಲೂ ನಟಿಸಿದ್ದಾರೆ. 2010ರಲ್ಲಿ ಅವರು ಕನ್ನಡದ ‘ಸೂರ್ಯಕಾಂತಿ’ ಸಿನಿಮಾದಲ್ಲಿ ನಟಿಸಿದ್ದರು. ಚೇತನ್ ಕುಮಾರ್ ಈ ಚಿತ್ರಕ್ಕೆ ಹೀರೋ. ಆ ಬಳಿಕ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆದರು.

Published On - 6:37 am, Sat, 10 September 22