ಬೆಂಗಳೂರು: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಲೇಡಿ ಪೊಲೀಸರಿಗೆ ಎದುರಾಗಿದ್ದು ಅವುಗಳನ್ನು ಪಾಲಿಸುವ ಮಹಿಳಾ ಕಾನ್ಸ್ಸ್ಟೇಬಲ್!
ನಿಯಮಗಳನ್ನು ಪಾಲಿಸುವ ಒಬ್ಬ ಲೇಡಿ ಪೊಲೀಸ್ ಕಾನ್ಸ್ಟೇಬಲ್ ನಿಯಮಗಳನ್ನು ಪಾಲಿಸದ ಪೊಲೀಸರಿಗೆ ಚೆನ್ನಾಗಿ ಉಗಿದು ಹೆಲ್ಮೆಟ್ ಧರಿಸಿ ಅಂತ ಹೇಳುತ್ತಿದ್ದಾರೆ.
ಬೆಂಗಳೂರು: ನಗರದಲ್ಲಿ ಸಂಚಾರಿ ನಿಯಮಗಳನ್ನು (traffic rules) ಪಾಲಿಸುವ ಪೊಲೀಸರು ಇದ್ದಾರೆ ಮತ್ತು ಅವುಗಳನ್ನು ಗಾಳಿಗೆ ತೂರುವವರು ಕೂಡ. ಇಲ್ನೋಡಿ, ಮೂವರು ಪೊಲೀಸ್ ಮಹಿಳಾಮಣಿಗಳು (lady constables) ಒಂದೇ ಸ್ಕೂಟರ್ (scooter) ಮೇಲೆ ಹೆಲ್ಮೆಟ್ ಧರಿಸದೆ ನಮ್ಮನ್ಯಾರು ಕೇಳೋರು ಅನ್ನೋ ಧೋರಣೆಯಲ್ಲಿ ನಗರದ ರಸ್ತೆಯೊಂದರಲ್ಲಿ ಹೊರಟಿದ್ದಾರೆ. ಆದರೆ ಈ ಸರ್ಕಲ್ ನಲ್ಲಿ ಅವರಿಗೆ ಎದುರಾಗಿದ್ದು ನಿಯಮಗಳನ್ನು ಪಾಲಿಸುವ ಒಬ್ಬ ಲೇಡಿ ಪೊಲೀಸ್ ಕಾನ್ಸ್ಟೇಬಲ್ ನಿಯಮಗಳನ್ನು ಪಾಲಿಸದ ಪೊಲೀಸರಿಗೆ ಚೆನ್ನಾಗಿ ಉಗಿದು ಹೆಲ್ಮೆಟ್ ಧರಿಸಿ ಅಂತ ಹೇಳುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos