‘777 ಚಾರ್ಲಿ’ ಸಿನಿಮಾ ನೋಡಿ ಕಣ್ಣೀರು ಹಾಕಿದ ರಕ್ಷಿತ್ ಶೆಟ್ಟಿ ತಾಯಿ

Edited By:

Updated on: Jun 10, 2022 | 2:02 PM

ರಕ್ಷಿತ್ ಶೆಟ್ಟಿ ಅವರ ತಾಯಿ ರಂಜಿನಿ ಶೆಟ್ಟಿ ಕೂಡ ‘777 ಚಾರ್ಲಿ’ ಸಿನಿಮಾ ನೋಡಿದ್ದಾರೆ. ಅವರು ಸಿನಿಮಾ ನೋಡುತ್ತಿದ್ದಂತೆ ಭಾವುಕರಾಗಿ, ಕಣ್ಣೀರು ಹಾಕಿದ್ದಾರೆ.

‘777 ಚಾರ್ಲಿ’ ಸಿನಿಮಾ (777 Charlie) ಇಂದು (ಜೂನ್ 10) ತೆರೆಗೆ ಬಂದಿದೆ. ಈ ಸಿನಿಮಾಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ಅನೇಕರಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಿದೆ. ದೇಶದ ನಾನಾ ಕಡೆಗಳಲ್ಲಿ ಜೂನ್ 9ರಂದು ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿತ್ತು. ಸಿನಿಮಾ ನೋಡಿದ ಪ್ರೇಕ್ಷಕರಿಂದ ಧನಾತ್ಮಕ ಪ್ರತಿಕ್ರಿಯೆ ಬರುತ್ತಿರುವ ಹಿನ್ನೆಲೆಯಲ್ಲಿ ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಈಗ ರಕ್ಷಿತ್ ಶೆಟ್ಟಿ ಅವರ (Rakshit Shetty) ತಾಯಿ ರಂಜಿನಿ ಶೆಟ್ಟಿ ಕೂಡ ‘777 ಚಾರ್ಲಿ’ ಸಿನಿಮಾ ನೋಡಿದ್ದಾರೆ. ಅವರು ಸಿನಿಮಾ ನೋಡುತ್ತಿದ್ದಂತೆ ಭಾವುಕರಾಗಿ, ಕಣ್ಣೀರು ಹಾಕಿದ್ದಾರೆ. ಸಿನಿಮಾ ನೋಡಿದ ಅನೇಕರು ಭಾವುಕರಾಗಿರುವ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

 

Loading...
Unable to load recommendations.
Follow Us
TV9 Web

TV9 Kannada

Read More