ಕನ್ನಡದಲ್ಲೂ ‘ಹೇಮಾ ಸಮಿತಿ’ ರೀತಿ ವರದಿ ಬೇಕು ಎಂಬ ಮಾತಿಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?
ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರ ಒಳಿತಿಗಾಗಿ ಹಲವರು ಧ್ವನಿ ಎತ್ತಿದ್ದಾರೆ. ಈಗಾಗಲೇ ಫೈರ್ ಸಂಸ್ಥೆಯ ಮೂಲಕ ನೂರಾರು ಜನರು ಸಹಿ ಮಾಡಿ ಸರ್ಕಾರಕ್ಕೆ ಒಂದು ಮನವಿ ಸಲ್ಲಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸಿದ ಶೋಷಣೆಗಳ ಬಗ್ಗೆ ತನಿಖೆ ನಡೆಸಲು ಒಂದು ಸಮಿತಿ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
‘ಹೇಮಾ ಸಮಿತಿ’ ರೀತಿ ನಮ್ಮಲ್ಲೂ ಒಂದು ಕಮಿಟಿ ರಚನೆ ಆಗಬೇಕು ಎಂಬುದು ಒಳ್ಳೆಯ ಉದ್ದೇಶ. ನಾವು ಕೂಡ ಅದಕ್ಕೆ ಸಹಿ ಹಾಕುತ್ತೇವೆ. ಸಹಿ ಹಾಕಿದ ಮೇಲೆ ನಾನು ಮತ್ತೆ ಗುಹೆಯಲ್ಲಿ ಹೋಗಿ ಕುಳಿತುಕೊಂಡು ಸಿನಿಮಾ ಮಾಡಿದರೆ ಅದಕ್ಕೆ ಅರ್ಥ ಇರುವುದಿಲ್ಲ. ಒಮ್ಮೆ ಸಹಿ ಮಾಡಿದ ಮೇಲೆ ಅದರ ಹಿಂದಿರುವ ಕೆಲಸವನ್ನು ಕೂಡ ನಾನು ಮಾಡಬೇಕು’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos