ಅದು ಶಾಂಪೇನ್ ಅಲ್ಲವೇ ಅಲ್ಲ; ರಕ್ಷಿತಾ ಪ್ರೇಮ್​

| Updated By: ರಾಜೇಶ್ ದುಗ್ಗುಮನೆ

Updated on: Nov 13, 2021 | 6:05 PM

‘ಅದು ನಿಜವಾಗಲೂ ಶಾಂಪೇನ್​ ಬಾಟಲಿ ಆಗಿರಲಿಲ್ಲ. ಅದು ನಾನ್​ ಆಲ್ಕೋಹಾಲಿಕ್​ ಬಾಟಲಿ. ತಪ್ಪಾಗಿ ಸಂದೇಶ ಹೋಗಿದೆ. ಪುನೀತ್​ ಅಭಿಮಾನಿಗಳಿಗೆ ನೋವಾಗಿದೆ. ಆ ಬಗ್ಗೆ ನಾವು ಕ್ಷಮೆ ಕೇಳುತ್ತೇವೆ’ ಎಂದಿದ್ದಾರೆ ರಕ್ಷಿತಾ.

ರಕ್ಷಿತಾ ಪ್ರೇಮ್​ ಸಹೋದರ ರಾಣ ಅವರು ‘ಏಕ್​ ಲವ್​ ಯಾ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ ಆದ್ದರಿಂದ ಹೆಚ್ಚಿನ ನಿರೀಕ್ಷೆ ಇದೆ. ಪ್ರೇಮ್​ ಅವರು ‘ಏಕ್​ ಲವ್​ ಯಾ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನವೆಂಬರ್ 12ರಂದು ಈ ಚಿತ್ರದ ಸುದ್ದಿಗೋಷ್ಠಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಡವಟ್ಟೊಂದು ಸಂಭವಿಸಿತ್ತು. ವೇದಿಕೆಯಲ್ಲಿ ಪುನೀತ್​ ಫೋಟೋ ಇರಿಸಿ ನಮನ ಸಲ್ಲಿಸಲಾಗಿತ್ತು. ಬಳಿಕ ಹಾಡು ಬಿಡುಗಡೆ ಮಾಡುವಾಗ ಬಾಟಲ್​ ಒಂದು ಓಪನ್​ ಮಾಡಲಾಗಿತ್ತು. ಇದು ಶಾಂಪೇನ್​ ಬಾಟಲಿ ಏಂದೇ ಹೇಳಲಾಗಿತ್ತು. ಆ ಬಗ್ಗೆ ರಕ್ಷಿತಾ ಪ್ರೇಮ್ ಟಿವಿ9 ಕನ್ನಡಕ್ಕೆ​ ಪ್ರತಿಕ್ರಿಯೆ ನೀಡಿದ್ದು, ಪುನೀತ್​ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಜತೆಗೆ ಅದು ಶಾಂಪೇನ್​ ಬಾಟಲಿ ಆಗಿರಲಿಲ್ಲ ಎಂದಿದ್ದಾರೆ.

‘ಅದು ನಿಜವಾಗಲೂ ಶಾಂಪೇನ್​ ಬಾಟಲಿ ಆಗಿರಲಿಲ್ಲ. ಅದು ನಾನ್​ ಆಲ್ಕೋಹಾಲಿಕ್​ ಬಾಟಲಿ. ತಪ್ಪಾಗಿ ಸಂದೇಶ ಹೋಗಿದೆ. ಪುನೀತ್​ ಅಭಿಮಾನಿಗಳಿಗೆ ನೋವಾಗಿದೆ. ಆ ಬಗ್ಗೆ ನಾವು ಕ್ಷಮೆ ಕೇಳುತ್ತೇವೆ’ ಎಂದಿದ್ದಾರೆ ರಕ್ಷಿತಾ.

ಇದನ್ನೂ ಓದಿ: ‘ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ’: ಶಾಂಪೇನ್​ ಅಚಾತುರ್ಯಕ್ಕೆ ರಕ್ಷಿತಾ ಪ್ರೇಮ್​ ಕ್ಷಮೆ

Published on: Nov 13, 2021 05:57 PM