ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಪ್ರಕಾಶಂ ಜಿಲ್ಲೆಯ ಪಂಗುಲೂರು ಮಂಡಲದ ರೇನಿಂಗವರಂ ಗ್ರಾಮದಲ್ಲಿ ನಡೆದ ಟಗರು ಓಟದ ಸ್ಪರ್ಧೆಗಳು ಆಕರ್ಷಕವಾಗಿದ್ದವು. ಗ್ರಾಮದಲ್ಲಿ ಆಯೋಜಿಸಲಾದ ಟಗರು ಓಟದ ಸ್ಪರ್ಧೆಗಳಿಗೆ ಸ್ಥಳೀಯರು ಮತ್ತು ನೆರೆಯ ಹಳ್ಳಿಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಕಾಶಂ, ಬಾಪಟ್ಲಾ ಮತ್ತು ಮಾರ್ಕಪುರಂ ಜಿಲ್ಲೆಗಳಿಂದ ಸುಮಾರು 41 ಜೋಡಿ ಟಗರುಗಳು ಬಂದವು.
ಹೈದರಾಬಾದ್, ಜನವರಿ 1: ಇಂದು ಹೊಸ ವರ್ಷದ (New Year Celebration) ಆಚರಣೆಯ ಸಂದರ್ಭದಲ್ಲಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪಂಗುಲೂರು ಮಂಡಲದ ರೇಣಿಂಗವರಂ ಗ್ರಾಮದಲ್ಲಿ ನಡೆದ ಸಾಂಪ್ರದಾಯಿಕ ಟಗರು ಸ್ಪರ್ಧೆಗಳು ಪ್ರೇಕ್ಷಕರನ್ನು ವಿಶೇಷವಾಗಿ ಆಕರ್ಷಿಸಿದವು. ನೆರೆಯ ಹಳ್ಳಿಗಳಿಂದ ಹಾಗೂ ಪ್ರಕಾಶಂ, ಬಾಪಟ್ಲ ಮತ್ತು ಮಾರ್ಕಪುರಂ ಜಿಲ್ಲೆಗಳಿಂದ ಸುಮಾರು 41 ಜೋಡಿ ಟಗರುಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಈ ಅಪರೂಪದ ಟಗರು ಕಾಳಗ ನೋಡಲು ಹಲವು ಜಿಲ್ಲೆಗಳಿಂದ ಜನರು ಆಗಮಿಸಿದ್ದರು.
ತೆಲುಗು ದೇಶಂ ಪಕ್ಷದ ನಾಯಕ ಬೋರೆಡ್ಡಿ ಓಬುಲ್ ರೆಡ್ಡಿ ಅವರ ಮೇಲ್ವಿಚಾರಣೆಯಲ್ಲಿ ಈ ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಗಳ ಮುಖ್ಯ ಉದ್ದೇಶ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವುದು ಮತ್ತು ಹಬ್ಬದ ಸಮಯದಲ್ಲಿ ಜನರಲ್ಲಿ ಏಕತೆಯನ್ನು ತೋರಿಸುವುದು. ಸಂಕ್ರಾಂತಿ ಮತ್ತು ದಸರಾ ಹಬ್ಬಗಳಲ್ಲಿ ಮತ್ತು ಹಳ್ಳಿ ಜಾತ್ರೆಗಳಲ್ಲಿ ಇಲ್ಲಿ ಗೂಳಿ ಓಟದ ಜೊತೆಗೆ ಟಗರು ಸ್ಪರ್ಧೆಗಳನ್ನು ನಡೆಸುವುದು ವಾಡಿಕೆ. ಪ್ರಾಣಿ ಹಿಂಸೆ ನಿಷೇಧಿಸಿರುವುದರಿಂದ ಕೆಲವು ಪ್ರದೇಶಗಳಲ್ಲಿ ಮಾತ್ರ ವಿಶೇಷ ಅನುಮತಿಯೊಂದಿಗೆ ಇದನ್ನು ನಡೆಸಲಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ