ರಾಮಲಲ್ಲಾ ಮೂರ್ತಿ ಕೆತ್ತಲು ಬಳಕೆಯಾದ ಕೃಷ್ಣಶಿಲೆ ಸಿಕ್ಕ ಮೈಸೂರು ಬಳಿಯ ಜಮೀನಲ್ಲಿ ರಾಮಮಂದಿರ ನಿರ್ಮಿಸಲಾಗುವುದು: ಜಿಟಿ ದೇವೇಗೌಡ

|

Updated on: Jan 20, 2024 | 7:32 PM

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸಿದ್ದಾಗ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಕುಳಿತು ಅರ್ಧಗಂಟೆ ತಪಸ್ಸು ಮಾಡಿದ್ದರು ಮತ್ತು ಅವರ ಪ್ರಾರ್ಥನೆಯನ್ನು ದೇವಿ ಕೇಳಿ ರಾಮನ ವಿಗ್ರಹಕ್ಕೆ ಶಿಲೆಯನ್ನು ಒದಗಿಸಿದ್ದಾಳೆ ಎಂದು ಗೌಡರು ಹೇಳಿದರು.

ಮೈಸೂರು: ಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ (Arun Yogiraj) ಕೆತ್ತಿರುವ ಬಾಲರಾಮನ ಮೂರ್ತಿಗೆ ಬಳಸಿದ ಕೃಷ್ಣಶಿಲೆ ಸಿಕ್ಕ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಹಾರೋಹಳ್ಳಿಯ 196 ಮತ್ತು 197 ಸರ್ವೆ ನಂಬರಿನ ಜಮೀನಲ್ಲೇ ರಾಮಮಂದಿರ (Ram Mandir) ನಿರ್ಮಿಸುತ್ತೇವೆ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ (GT Deve Gowda) ಹೇಳಿದರು. ಮೈಸೂರು ನಗರದಲ್ಲಿಂದು ಮಾಧ್ಯಮ ಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಶಾಸಕರು ಕೃಷ್ಣಶಿಲೆ ಸಿಕ್ಕ 2 ಎಕರೆ 16 ಗುಂಟೆ ಜಮೀನು ಒಬ್ಬ ದಲಿತ ಮುಖಂಡನಾಗಿ ಸೇರಿದ್ದು ಅವರು ರಾಮಮಂದಿರ ನಿರ್ಮಾಣಕ್ಕೆ ಅದನ್ನು ನೀಡಲು ಮುಂದಾಗಿದ್ದಾರೆ ಎಂದು ಶಾಸಕ ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸಿದ್ದಾಗ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಕುಳಿತು ಅರ್ಧಗಂಟೆ ತಪಸ್ಸು ಮಾಡಿದ್ದರು ಮತ್ತು ಅವರ ಪ್ರಾರ್ಥನೆಯನ್ನು ದೇವಿ ಕೇಳಿ ರಾಮನ ವಿಗ್ರಹಕ್ಕೆ ಶಿಲೆಯನ್ನು ಒದಗಿಸಿದ್ದಾಳೆ ಎಂದು ಗೌಡರು ಹೇಳಿದರು. ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆ ನಡೆಯುವ ಜನವರಿ 22 ರಂದು ಬೆಳಗ್ಗೆ 7 ಗಂಟೆಗೆ ಆ ಜಮೀನಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಅಂತ ಜಿಟಿ ದೇವೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ