ತ್ರಿಚ್ಚಿಯ ಶ್ರೀರಂಗಂ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿಯವರಿಗೆ ಸಿಕ್ಕ ಸ್ವಾಗತ ಅಭೂತಪೂರ್ವ!
ರಸ್ತೆಗಳ ಇಕ್ಕೆಲಗಳಲ್ಲಿ, ಮನೆಗಳ ಮುಂದೆ, ಮನೆಗಳ ಬಾಲ್ಕನಿಯಲ್ಲಿ ಜನ ನಿಂತು ಹರ್ಷೋದ್ಗಾರಗಳ ಮೂಲಕ ಪ್ರಧಾನಿ ಮೋದಿಯವರನ್ನು ಮಂದಿರಗಳ ಪಟ್ಟಣಕ್ಕೆ ಸ್ವಾಗತಿಸಿದರು. ‘ಮೋದಿ, ಮೋದಿ’ ಅಂತ ಕೂಗುತ್ತಾ, ಕೈಗಳೆತ್ತಿ ನಮಸ್ಕರಿಸುತ್ತಿದ್ದ ಜನರನ್ನು ನೋಡಿ ಮೋದಿ ಮುಗುಳ್ನಗುತ್ತಾ ಅವರೆಡೆ ಕೈಬೀಸಿ ಅವರ ಪ್ರೀತಿ-ಅಭಿಮಾನ ಸ್ವೀಕರಿಸಿದರು.
ಚೆನ್ನೈ: ತಮಿಳುನಾಡುನಲ್ಲಿ ಎರಡು ದಿನಗಳ ಧಾರ್ಮಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಇಂದು ತ್ರಿಚ್ಚಿ ಎಂದು ಕರೆಸಿಕೊಳ್ಳುವ ತಿರುಚಿರಾಪಳ್ಳಿಗೆ (Tiruchirapalli) ಬಂದಾಗ ಅವರಿಗೆ ಸಿಕ್ಕ ಸ್ವಾಗತ ನೋಡಿ ಹೇಗಿದೆ! ನಿಮಗೆ ಗೊತ್ತಿರಲಿ, ಇದು ಪೂರ್ವನಿಯೋಜಿತ ರೋಡ್ ಶೋ (road show) ಅಗಿರಲಿಲ್ಲ, ಪ್ರಧಾನಿ ಮೋದಿ ಅವರು ತಮ್ಮೂರಿಗೆ ಬಂದ ಸಂಗತಿ ಕಾಡ್ಗಿಚ್ಚಿನಂತೆ ಹಬ್ಬಿ ಮನೆಗಳಲ್ಲಿದ್ದ ಜನ ರಸ್ತೆಗಳಿಗೆ ಧಾವಿಸಿದಾಗ ರೋಡ್ ಶೋನಂಥ ಸನ್ನಿವೇಶ ಸೃಷ್ಟಿಯಾಯಿತು. ಇದು ತಿರುಚಿರಾಪಳ್ಳಿ ಜಿಲ್ಲೆಯ ಶ್ರೀರಂಗಂ. ರಸ್ತೆಗಳ ಇಕ್ಕೆಲಗಳಲ್ಲಿ, ಮನೆಗಳ ಮುಂದೆ, ಮನೆಗಳ ಬಾಲ್ಕನಿಯಲ್ಲಿ ಜನ ನಿಂತು ಹರ್ಷೋದ್ಗಾರಗಳ ಮೂಲಕ ಪ್ರಧಾನಿ ಮೋದಿಯವರನ್ನು ಮಂದಿರಗಳ ಪಟ್ಟಣಕ್ಕೆ ಸ್ವಾಗತಿಸಿದರು. ‘ಮೋದಿ, ಮೋದಿ’ ಅಂತ ಕೂಗುತ್ತಾ, ಕೈಗಳೆತ್ತಿ ನಮಸ್ಕರಿಸುತ್ತಿದ್ದ ಜನರನ್ನು ನೋಡಿ ಮೋದಿ ಮುಗುಳ್ನಗುತ್ತಾ ಅವರೆಡೆ ಕೈಬೀಸಿ ಅವರ ಪ್ರೀತಿ-ಅಭಿಮಾನ ಸ್ವೀಕರಿಸಿದರು. ಶ್ರೀರಂಗಂನಲ್ಲಿರುವ ವಿಶ್ವವಿಖ್ಯಾತ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು.
ಶ್ರೀರಂಗಂ ದೇವಸ್ಥಾನವು ಶ್ರೀ ರಂಗನಾಥರ್ ಗೆ ಸಮರ್ಪಣೆಯಾಗಿರುವ ಹಿಂದೂ ದೇವಾಲಯವಾಗಿದೆ. ಭಗವಾನ್ ವಿಷ್ಣುನನ್ನು ಆರಾಧಿಸುವ ಅತ್ಯಂತ ಪ್ರಮುಖ ದೇವಸ್ಥಾನ ಇದಾಗಿದ್ದು ವಿಶ್ವದ ಅತಿದೊಡ್ಡ ದೇವಾಲಯ ಸಂಕೀರ್ಣವೆಂಬ ಖ್ಯಾತಿಗೂ ಪಾತ್ರವಾಗಿದೆ. ಕ್ರಿ.ಶ 15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ಈ ದೇವಾಲಯ ಕಟ್ಟಿದರು ಅಂತ ಇತಿಹಾಸ ಹೇಳುತ್ತದೆ. ದೇವಸ್ಥಾನದ ಆವರಣದಲ್ಲಿ ಹಲವಾರು ವಿದ್ವಾಂಸರು ಕಂಬ ರಾಮಾಯಣದಿಂದ ಆಯ್ದ್ದ ವಚನಗಳನ್ನು ಪಠಿಸಿದ್ದನ್ನು ಪ್ರಧಾನಿ ಮೋದಿ ಶ್ರದ್ಧೆಯಿಂದ ಆಲಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:47 pm, Sat, 20 January 24