ಸೂರ್ಯನ ಕಿರಣದ ಮೂಲಕ ಅಯೋಧ್ಯೆ ರಾಮಮಂದಿರದ ಚಿತ್ರ ಬಿಡಿಸಿದ ಮೈಸೂರು ಕಲಾವಿದ

ಸೂರ್ಯನ ಕಿರಣದ ಮೂಲಕ ಅಯೋಧ್ಯೆ ರಾಮಮಂದಿರದ ಚಿತ್ರ ಬಿಡಿಸಿದ ಮೈಸೂರು ಕಲಾವಿದ

ರಾಮ್​, ಮೈಸೂರು
| Updated By: ವಿವೇಕ ಬಿರಾದಾರ

Updated on: Jan 20, 2024 | 3:07 PM

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದ್ದು, ರಾಮಲಲ್ಲಾ (ಬಾಲ ರಾಮ)ನ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ದೇಶದಾದ್ಯಂತ ಸಡಗರ, ಸಂಭ್ರಮ ಮುಗಿಲು‌ ಮುಟ್ಟಿದೆ. ಈ ಮಧ್ಯೆ ಪ್ರಭು ಶ್ರೀರಾಮಚಂದ್ರನಿಗೆ ಭಕ್ತರು ವಿವಿಧ ರೀತಿಯಲ್ಲಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಅದೇ ರೀತಿಯಾಗಿ ಮೈಸೂರಿನ ಕಲಾವಿದ ಶ್ಯಾಮ್​ ಸೂರ್ಯ ಕಿರಣ ಬಳಿಸಿಕೊಂಡು ಅಯೋಧ್ಯೆ ರಾಮಮಂದಿರದ ಚಿತ್ರ ಬಿಡಿಸಿದ್ದಾರೆ.

ಮೈಸೂರು, ಜನವರಿ 20: ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದ್ದು, ರಾಮಲಲ್ಲಾ (ಬಾಲ ರಾಮ)ನ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ದೇಶದಾದ್ಯಂತ ಸಡಗರ, ಸಂಭ್ರಮ ಮುಗಿಲು‌ ಮುಟ್ಟಿದೆ. ಈ ಮಧ್ಯೆ ಪ್ರಭು ಶ್ರೀರಾಮಚಂದ್ರನಿಗೆ ಭಕ್ತರು ವಿವಿಧ ರೀತಿಯಲ್ಲಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಅದೇ ರೀತಿಯಾಗಿ ಮೈಸೂರಿನ ಕಲಾವಿದ ಶ್ಯಾಮ್​ ಸೂರ್ಯ ಕಿರಣ ಬಳಿಸಿಕೊಂಡು ಅಯೋಧ್ಯೆ ರಾಮಮಂದಿರದ ಚಿತ್ರ ಬಿಡಿಸಿದ್ದಾರೆ. ಬೂದು ಗಾಜಿನ ಮೂಲಕ ಸೂರ್ಯನ ಕಿರಣ ಹಾಯಿಸಿ ಚಿತ್ರ ದಪ್ಪನೆಯ ಹಾಳೆಯ ಮೇಲೆ ಚಿತ್ರ ಬಿಡಿಸಿದ್ದಾರೆ. ಈ ಚಿತ್ರವನ್ನು ಬಿಡಿಸಲು ಶ್ಯಾಮ್​ ಕಳೆದ ಮೂರು ದಿನಗಳಿಂದ ಅಭ್ಯಾಸ ಮಾಡಿದ್ದಾರೆ. ಶ್ಯಾಮ್​ ಕಳೆದ 6 ವರ್ಷಗಳಿಂದ ಈ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂದು (ಜ.20) ಮೈಸೂರು ಅರಮನೆಯ ಕೋಟೆ ಆಂಜನೇಯ ದೇಗುಲದ ಬಳಿ ಚಿತ್ರ ಬಿಡಿಸಿದ್ದಾರೆ.