ಫ್ಯಾನ್ಸ್ ಜತೆ ಒಂದೇ ತಟ್ಟೆಯಲ್ಲಿ ಊಟ ಮಾಡಿ, ಕೈ ತುತ್ತು ತಿನಿಸಿದ ದುನಿಯಾ ವಿಜಯ್
ಅಭಿಮಾನಿಗಳಿಗೆ ದುನಿಯಾ ವಿಜಯ್ ಅವರು ಕೈ ತುತ್ತು ತಿನಿಸಿದ್ದಾರೆ. ದೂರದ ಊರುಗಳಿಂದ ಬಂದ ಎಲ್ಲ ಅಭಿಮಾನಿಗಳಿಗೆ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ದುನಿಯಾ ವಿಜಯ್ ಮತ್ತು ಅವರ ಅಭಿಮಾನಿಗಳು ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದಾರೆ. ತಮ್ಮ ನೆಚ್ಚಿನ ನಟ ತೋರಿದ ಈ ಪರಿ ಪ್ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ ದುನಿಯಾ ವಿಜಯ್ ಅವರು 50ನೇ ವರ್ಷದ ಬರ್ತ್ಡೇ (Duniya Vijay Birthday) ಆಚರಿಸಿಕೊಂಡಿದ್ದಾರೆ. ತಮ್ಮ ಹುಟ್ಟೂರಾದ ಆನೇಕಲ್ ಸಮೀಪದ ಕುಂಬಾರನಹಳ್ಳಿಯಲ್ಲಿ ಅವರು ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ವಿಶೇಷ ಏನೆಂದರೆ, ಅಭಿಮಾನಿಗಳಿಗೆ ದುನಿಯಾ ವಿಜಯ್ (Duniya Vijay) ಅವರು ಕೈ ತುತ್ತು ತಿನಿಸಿದ್ದಾರೆ. ದೂರದ ಊರುಗಳಿಂದ ಬಂದ ಎಲ್ಲ ಅಭಿಮಾನಿಗಳಿಗೆ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ದುನಿಯಾ ವಿಜಯ್ ಮತ್ತು ಅವರ ಅಭಿಮಾನಿಗಳು (Duniya Vijay Fans) ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳು ಕೂಡ ಕೈ ತುತ್ತು ತಿನಿಸಿ ಖುಷಿಪಟ್ಟಿದ್ದಾರೆ. ತಮ್ಮ ಬಗ್ಗೆ ದುನಿಯಾ ವಿಜಯ್ ತೋರಿದ ಪ್ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ‘ಲವ್ ಯೂ ಬಾಸ್’ ಎಂದು ಜೈಕಾರ ಕೂಗಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ‘ಭೀಮ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

