ಡಾ ಮಂಜುನಾಥ್​ ಗೆಲುವು: ಹಿಂದೂ ದೇವಾಲಯದಲ್ಲಿ ಹರಕೆ ತೀರಿಸಿದ ಮುಸ್ಲಿಂ ವ್ಯಕ್ತಿ

| Updated By: ರಮೇಶ್ ಬಿ. ಜವಳಗೇರಾ

Updated on: Jun 05, 2024 | 5:55 PM

ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ ಮಂಜುನಾಥ್​ ಅವರ ಗೆಲುವಿಗಾಗಿ ಹರಕೆ ಹೊತ್ತಿದ್ದು, ಇದೀಗ ಅದರಂತೆ ಇಂದು(ಜೂನ್ 05) ರಾಮನಗರದ ಮೂಲದ ಮುಸ್ಲಿಂ ವ್ಯಕ್ತಿ ಯೂನಸ್ ಖಾನ್ ಎನ್ನುವರು ಮಹದೇಶ್ವರ ಬೆಟ್ಟಕ್ಕೆ ತೆರಳಿ ಮುಡಿಕೊಟ್ಟು ಹರಕೆ ತೀರಿಸಿದ್ದಾರೆ.

ರಾಮನಗರ, (ಜೂನ್ 05): ತಮ್ಮ ನಿಸ್ವಾರ್ಥ ಸೇವೆಯಿಂದಲೇ ಜನರ ಹೃದಯ ಗೆದ್ದಿರುವ ಖ್ಯಾತ ಹೈದ್ರೋಗ ವೈದ್ಯ ಡಾ. ಸಿಎನ್​ ಮಂಜುನಾಥ್ (Dr CN Manjunath)​ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರ ಸಹೋದರ, ಹಾಲಿ ಕಾಂಗ್ರೆಸ್​ ಸಂಸದರಾಗಿದ್ದ ಡಿಕೆ ಸುರೇಶ್​ (DK Suresh) ಅವರನ್ನು 2 ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದಾರೆ. ತಮ್ಮ ರಾಜಕೀಯ ಪ್ರವೇಶದ ಮೊದಲ ಹೆಜ್ಜೆಯಲ್ಲೇ ಪ್ರಭಾವಿ ನಾಯಕನನ್ನು ಮಣಿಸಿದ್ದಾರೆ. ಮಂಜುನಾಥ್ ಗೆಲುವಿಗೆ ಸುಧಾಮೂರ್ತಿ ಸೇರಿದಂತೆ ಹಲವರು ಹರಕೆ ಹೊತ್ತುಕೊಂಡಿದ್ದರು. ಅದರಲ್ಲಿ ಮುಸ್ಲಿಂ ಸಮುದಾಯದ ಯೂನಸ್ ಖಾನ್ ಎನ್ನುವರು ಸಹ ಒಬ್ಬರು. ಹೌದು….ರಾಮನಗರ ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ಯೂನಸ್ ಖಾನ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ ಮಂಜುನಾಥ್ ಗೆಲ್ಲಬೇಕೆಂದು ಹರಕೆ ಹೊತ್ತುಕೊಂಡಿದ್ದರು. ಗೆದ್ದರೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮುಡಿಕೊಡುವುದಾಗಿ ಹರಕೆ ಹೊತ್ತಿದ್ದರು. ಇದೀಗ ಅದರಂತೆ ಯೂನಸ್ ಖಾನ್ ಅವರು​ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮುಡಿಕೊಟ್ಟು ಹರಕೆ ತೀರಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 05, 2024 05:49 PM