Ramesh Aravind: ಸೋಷಿಯಲ್ ಮೀಡಿಯಾ ವರವೋ, ಶಾಪವೋ?; ರಮೇಶ್ ಅರವಿಂದ್ ಹೇಳಿದ್ದೇನು?

| Updated By: shivaprasad.hs

Updated on: Nov 11, 2021 | 10:16 PM

ನಟ ರಮೇಶ್ ಅರವಿಂದ್ ನಟನೆಯ 102ನೇ ಚಿತ್ರವಾದ ‘100’ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಚಿತ್ರದ ಕುರಿತು ಮಾತನಾಡಿದ್ದಾರೆ.

ನಟ ರಮೇಶ್ ಅರವಿಂದ್ ತಮ್ಮ ‘100’ ಚಿತ್ರದ ಮುಖಾಂತರ ಮತ್ತೆ ನಿರ್ದೇಶನಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಇದರೊಂದಿಗೆ ಅವರು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಸೇರಿದಂತೆ ಅನೇಕ ತಾರೆಯರು ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ಟ್ರೈಲರ್ ಕುತೂಹಲ ಮೂಡಿಸುವಂತಿದೆ. ಚಿತ್ರದ ಕುರಿತು ಸುದ್ದಿಗೋಷ್ಠಿಯಲ್ಲಿ ರಮೇಶ್ ಮಾತನಾಡಿದ್ದು, ಚಿತ್ರದ ಕುರಿತು ಹಲವು ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಜನರು ಏಕೆ ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿದ್ದಾರೆ? ಇದರಿಂದ ಏನು ಸಮಸ್ಯೆಗಳಾಗುತ್ತಿವೆ ಈ ಎಲ್ಲವನ್ನೂ ಚಿತ್ರದಲ್ಲಿ ಹೇಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳು ವರವೋ, ಶಾಪವೋ ಎಂಬುದು ಬಳಸುವವರ ಕೈಯಲ್ಲಿದೆ. ಅದನ್ನು ಬಹಳ ಜವಾಬ್ದಾರಿಯುತವಾಗಿ ಬಳಸಬೇಕು. ಅದನ್ನೇ ಕಮರ್ಷಿಯಲ್ ವಿಧಾನದ ಮೂಲಕ ‘100’ ಚಿತ್ರದಲ್ಲಿ ಹೇಳಲಾಗಿದೆ. ಇದಕ್ಕಾಗಿ ಸೈಬರ್ ಕ್ರೈಮ್ ಕುರಿತು ಅಧ್ಯಯನವನ್ನೂ ಮಾಡಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.

ನವೆಂಬರ್ 19ರಂದು ‘100’ ಚಿತ್ರ ಬಿಡುಗಡೆಯಾಗುತ್ತಿದ್ದು, ಸುಮಾರು 120ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳು ಜೀ5 ಗೆ ಮಾರಾಟವಾಗಿದ್ದು, ಚಿತ್ರ ಬಿಡುಗಡೆಗೊಂಡ ಸುಮಾರು 3 ತಿಂಗಳ ನಂತರ ಅದರಲ್ಲಿ ಬರಬಹುದು ಎಂದು ರಮೇಶ್ ತಿಳಿಸಿದ್ದಾರೆ.

ಇದನ್ನೂ ಓದಿ:

Ramesh Aravind: ವಿಷ್ಣುವರ್ಧನ್ ಜೊತೆ ಮೂರು ಚಿತ್ರ ಮಾಡಿದ್ದರೂ ನೂರು ಚಿತ್ರ ಮಾಡಿದ ಖುಷಿ ಇದೆ; ರಮೇಶ್ ಅರವಿಂದ್

Samantha: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ವೃಕ್ಷಮಾತೆ ತುಳಸಿ ಗೌಡ ಅವರ ಜೀವನ ಕತೆ ತಿಳಿದು ಸಮಂತಾ ಹೇಳಿದ್ದೇನು?