Lok Sabha Polls: ಮಹಾನಾಯಕನಿಗೆ ಹಣದ ಸೊಕ್ಕಿದೆ, ಅವನು ಎಲ್ಲವನ್ನೂ ಖರೀದಿಸಬಲ್ಲ: ರಮೇಶ್ ಜಾರಕಿಹೊಳಿ

|

Updated on: May 07, 2024 | 12:07 PM

ಪ್ರಜ್ವಲ್ ರೇವಣ್ಣ ಸಿಡಿಗಳಲ್ಲಿ ಮಹಾನಾಯಕ ಡಿಕೆ ಶಿವಕುಮಾರ್ ಪಾತ್ರ ಇರೋದು ಸುತ್ತು ಬಳಸಿ ನೋಡಿದ ಮೇಲೆ ಗೊತ್ತಾಗುತ್ತದೆ, ಅದರೆ ತನ್ನಲ್ಲಿ ಅವನು ಮಾತಾಡಿರುವ ಆಡಿಯೋ ಕ್ಲಿಪ್ ಇದೆ, ಇದು ನೇರವಾಗಿ ಅವನ ಪಾತ್ರವನ್ನು ಖಚಿತಪಡಿಸುತ್ತದೆ ಎಂದು ಜಾರಕಿಹೊಳಿ ಹೇಳಿದರು.

ಬೆಳಗಾವಿ: ಮತಗಟ್ಟೆಗೆ ತೆರಳುವ ಮೊದಲು ಗೋಕಾಕನಲ್ಲಿ ಲಕ್ಷ್ಮಿದೇವಿ ಗುಡಿಯಲ್ಲಿ ಪೂಜೆ ಸಲ್ಲಿಸಿದ ಸ್ಥಳೀಯ ಶಾಸಕ ರಮೇಶ ಜಾರಕಿಹೊಳಿ (Raಮesh Jarkiholi) ಮತದಾನ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಅವರ ಮತಿ ಅಶ್ಲೀಲ ಸಿಡಿಗಳ ಮೇಲೆ ಕೇಂದ್ರೀಕೃತವಾಗಿದ್ದು ಸಹಜವಾಗಿತ್ತು. ಮೊದಲು ತನ್ನನ್ನು ಟಾರ್ಗೆಟ್ ಮಾಡಲಾಗಿತ್ತು ಮತ್ತು ಈಗ ಮತ್ತೊಬ್ಬ, ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಜಿ ಪರಮೇಶ್ವರ್ (G Parameshwara) ಅವರ ಸಿಡಿಗಳು ಬಂದರೂ ಆಶ್ಚರ್ಯವಿಲ್ಲ. ಹಾಗಾಗಿ ನಾನು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಕೈ ಮುಗಿದು ಕೇಳಿಕೊಳ್ಳುತ್ತಾನೆ, ಈ ಸಿಡಿ ಧಂದೆಯನ್ನು ಕೊನೆಗಾಣಿಲು ಅವರು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ಸಿಡಿಗಳಲ್ಲಿ ಮಹಾನಾಯಕ ಡಿಕೆ ಶಿವಕುಮಾರ್ ಪಾತ್ರ ಇರೋದು ಸುತ್ತು ಬಳಸಿ ನೋಡಿದ ಮೇಲೆ ಗೊತ್ತಾಗುತ್ತದೆ, ಅದರೆ ತನ್ನಲ್ಲಿ ಅವನು ಮಾತಾಡಿರುವ ಆಡಿಯೋ ಕ್ಲಿಪ್ ಇದೆ, ಇದು ನೇರವಾಗಿ ಅವನ ಪಾತ್ರವನ್ನು ಖಚಿತಪಡಿಸುತ್ತದೆ ಎಂದು ಜಾರಕಿಹೊಳಿ ಹೇಳಿದರು. ಆದರೆ ಮಹಾನಾಯಕನ ಬಳಿ ಸಾಕಷ್ಟು ಹಣವಿದೆ, ಎಲ್ಲವನ್ನೂ ಖರೀದಿ ಮಾಡುತ್ತಾನೆ, ಹಣದ ಮದವನ್ನು ಸದಾ ಪ್ರದರ್ಶಿಸುತ್ತಿರುತ್ತಾನೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Lok Sabha Polls: ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್