ರಮೇಶ್ ಜಾರಕಿಹೊಳಿ ಆಗಾಗ ಭೇಟಿಯಾಗುತ್ತಿರುತ್ತಾರೆ ಅದರೆ ನಾವು ರಾಜಕೀಯ ಚರ್ಚೆ ಮಾಡೋದಿಲ್ಲ: ಜಗದೀಶ್ ಶೆಟ್ಟರ್

|

Updated on: Oct 17, 2023 | 6:38 PM

ಜಾರಕಿಹೊಳಿ ಮಾತ್ರವಲ್ಲ ಇನ್ನೂ ಹಲವಾರು ಬಿಜೆಪಿ ನಾಯಕರು ಭೇಟಿಯಾಗುತ್ತಿರುತ್ತಾರೆ. ಮೊನ್ನೆ ಉಡುಪಿ ಮತ್ತು ಮಂಗಳೂರು ಕಡೆ ಪ್ರವಾಸ ಹೋದಾಗ ಅಲ್ಲಿನ ಸಾಕಷ್ಟು ಬಿಜೆಪಿ ನಾಯಕರು ಭೇಟಿಯಾಗಿದ್ದರು ಎಂದು ಶೆಟ್ಟರ್ ಹೇಳಿದರು. ಆದರೆ ತಮ್ಮನ್ನು ಭೇಟಿಯಾಗುವ ಬಿಜೆಪಿ ನಾಯಕರೊಂದಿಗೆ ಯಾವ ಕಾರಣಕ್ಕೂ ರಾಜಕಾರಣ ಚರ್ಚೆ ಮಾಡೋದಿಲ್ಲ ಎಂದರು

ಬೆಂಗಳೂರು: ಬಿಜೆಪಿಯ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಮತ್ತು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ (Jagadish Shettar) ನಡುವೆ ಈಗಲೂ ದೋಸ್ತಿ ಮುಂದುವರಿದಿದೆಯೇ, ಆಗಾಗ ಭೇಟಿಯಾಗುತ್ತಿರುತ್ತಾರೆಯೇ? ಹೌದು ಎನ್ನುತ್ತಾರೆ ಶೆಟ್ಟರ್. ತಮ್ಮ ನಡುವೆ ಹಿತಕರ ಮತ್ತು ಆರೋಗ್ಯಕರ ಗೆಳೆತನ (friendship) ಈಗಲೂ ಇದೆ, ಹಾಗಾಗಿ ಅವರು ಆಗಾಗ ನನ್ನನ್ನು ಭೇಟಿಯಾಗುತ್ತಿರುತ್ತಾರೆ ಆದರೆ ನಿರ್ದಿಷ್ಟವಾಗಿ ಇವತ್ತು ಭೇಟಿಯಾಗಿಲ್ಲ ಎಂದು ಶೆಟ್ಟರ್ ಹೇಳಿದರು. ಜಾರಕಿಹೊಳಿ ಮಾತ್ರವಲ್ಲ ಇನ್ನೂ ಹಲವಾರು ಬಿಜೆಪಿ ನಾಯಕರು ಭೇಟಿಯಾಗುತ್ತಿರುತ್ತಾರೆ. ಮೊನ್ನೆ ಉಡುಪಿ ಮತ್ತು ಮಂಗಳೂರು ಕಡೆ ಪ್ರವಾಸ ಹೋದಾಗ ಅಲ್ಲಿನ ಸಾಕಷ್ಟು ಬಿಜೆಪಿ ನಾಯಕರು ಭೇಟಿಯಾಗಿದ್ದರು ಎಂದು ಶೆಟ್ಟರ್ ಹೇಳಿದರು. ನಗರದಲ್ಲಿಂದು ಮಾದ್ಯಮ ಪ್ರತಿನಿಧಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ ಶೆಟ್ಟರ್, ಜಾರಕಿಹೊಳಿ ಅಥವಾ ಬೇರೆ ಯಾರೇ ಆಗಲಿ ಭೇಟಿಯಾಗಲು ಮನೆಗೆ ಬಂದಾಗ ಅವರನ್ನು ಮಾತಾಡಿಸದೆ ಕಳಿಸುವುದು ಆದೀತೆ? ಆದರೆ ತಮ್ಮನ್ನು ಭೇಟಿಯಾಗುವ ಬಿಜೆಪಿ ನಾಯಕರೊಂದಿಗೆ ಯಾವ ಕಾರಣಕ್ಕೂ ರಾಜಕಾರಣ ಚರ್ಚೆ ಮಾಡೋದಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on