ಕಂಬ್ಯಾಕ್ ಬಗ್ಗೆ ಬಿಗ್ ಅಪ್​​ಡೇಟ್ ಕೊಟ್ಟ ನಟಿ ರಮ್ಯಾ

| Updated By: ರಾಜೇಶ್ ದುಗ್ಗುಮನೆ

Updated on: Feb 12, 2025 | 8:12 AM

ನಟಿ ರಮ್ಯಾ ಅವರು ನಟನೆಯಿಂದ ದೂರ ಆಗಿ 10 ವರ್ಷಗಳ ಮೇಲೆ ಆಗಿದೆ. ಅವರು  ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಲಿ ಎಂಬುದು ಅಭಿಮಾನಿಗಳ ಆಸೆ. ಹೀಗಿರುವಾಗಲೇ ಅವರು ಕಂಬ್ಯಾಕ್ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಹೇಳಿದ್ದು ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ನಟಿ ರಮ್ಯಾ ಅವರು ನಟನೆಯಿಂದ ದೂರ ಇದ್ದು 10 ವರ್ಷಗಳ ಮೇಲೆ ಆಗಿದೆ. ಈಗ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ. ಆದರೆ, ಸದ್ಯಕ್ಕೆ ಇದು ಆಗೋ ಲಕ್ಷಣ ಇಲ್ಲ. ಈ ಬಗ್ಗೆ ರಮ್ಯಾ ಅವರು ಮಾತನಾಡಿದ್ದಾರೆ. ‘ಮಾಡಿದ್ದೇ ಮಾಡೋಕೆ ನನಗೆ ಬೇಸರ. ಹೀಗಾಗಿ, ಒಳ್ಳೆಯ ಸ್ಕ್ರಿಪ್ಟ್​ಗಾಗಿ ಕಾಯುತ್ತಾ ಇದ್ದೇನೆ. ಸಿಕ್ಕರೆ ಮಾಡುತ್ತೇನೆ’ ಎಂದಿದ್ದಾರೆ ರಮ್ಯಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.