Video: ಹುಟ್ಟುಹಬ್ಬದಂದು ಐಫೋನ್ನಿಂದ ಕೇಕ್ ಕತ್ತರಿಸಿದ ಏಕನಾಥ್ ಶಿಂಧೆ
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹುಟ್ಟುಹಬ್ಬದಂದು ತರಿಸಿದ ಕೇಕ್ ಅನ್ನು ಐಫೋನ್ನಿಂದ ಕತ್ತರಿಸಿರುವ ವಿಡಿಯೋ ವೈರಲ್ ಆಗಿದೆ. ಏಕನಾಥ್ ಶಿಂಧೆ ಅವರ ಜನ್ಮದಿನ ಫೆಬ್ರವರಿ 9 ರಂದು ಆಗಿತ್ತು. ಈ ಸಂದರ್ಭದಲ್ಲಿ, ಥಾಣೆಯಲ್ಲಿರುವ ಅವರ ಬೆಂಬಲಿಗರು ದೊಡ್ಡ ಕೇಕ್ ತಂದಿದ್ದರು. ಶಿಂಧೆ ತನ್ನ ಐಫೋನ್ ಮೊಬೈಲ್‌ನಿಂದ ಈ ಕೇಸ್ ಅನ್ನು ಕತ್ತರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶಿವಸೇನಾ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು, ಮಹಾರಾಷ್ಟ್ರದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ತಳಮಟ್ಟದ ನಾಯಕ ಎಂದು ಅವರನ್ನು ಕರೆದಿದ್ದರು.
ಏಕನಾಥ್ ಶಿಂಧೆ ಅವರ ಪತ್ನಿ ಲತಾ ಶಿಂಧೆ ಮತ್ತು ಸೊಸೆ ವೃಶಾಲಿ ಶಿಂಧೆ ಅವರ ತಂದೆ ಸಂಭಾಜಿ ಶಿಂಧೆ, ಸಂಸದ ಡಾ. ಶ್ರೀಕಾಂತ್ ಶಿಂಧೆ, ಮೊಮ್ಮಗ ರುದ್ರಾಂಶ್ ಮತ್ತು ಎಲ್ಲಾ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಏಕನಾಥ್ ಶಿಂಧೆ ಅವರ ಹುಟ್ಟುಹಬ್ಬವನ್ನು ಅವರ ಕಾರ್ಯಕರ್ತರು ಬಹಳ ಉತ್ಸಾಹದಿಂದ ಆಚರಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ