ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ ರಾಘವನ್
ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕರು ಕಡಿಮೆ. ಹೀಗಿರುವಾಗ ಅಂಥದ್ದೊಂದು ಪ್ರಯತ್ನಕ್ಕೆ ರಂಜನಿ ರಾಘವನ್ ಅವರು ಮುಂದಾಗಿದ್ದಾರೆ. ಅವರು ಸಿನಿಮಾ ಒಂದನ್ನು ನರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಪ್ಡೇಟ್ ನೀಡಲು ಅವರು ಲೈವ್ ಬಂದಿದ್ದರು. ಈ ವೇಳೆ ಸಿನಿಮಾ ಪ್ರಚಾರಕ್ಕೆ ಹೊಸ ತಂತ್ರ ಉಪಯೋಗಿಸಿದ್ದಾಗಿ ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಪ್ರತಿ ದಿನ ಹಲವು ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ, ಅನೇಕ ಸಿನಿಮಾಗಳು ಥಿಯೇಟರ್ಗೆ ಬಂದ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಇದಕ್ಕೆ ಕಾರಣ ಪ್ರಚಾರದ ಕೊರತೆ. ತಮ್ಮ ನಿರ್ದೇಶನದ ಮೊದಲ ಸಿನಿಮಾಗೆ ಆ ರೀತಿ ಆಗಬಾರದು ಎಂಬುದು ರಂಜನಿ ರಾಘವನ್ (Ranjani Raghavan) ಉದ್ದೇಶ. ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈಗಿನಿಂದಲೇ ಸಿನಿಮಾ ಪ್ರಚಾರ ಕೂಡ ಆರಂಭಿಸಿದ್ದಾರೆ. ಏಪ್ರಿಲ್ 18ರಂದು ಚಿತ್ರದ ಪೋಸ್ಟರ್ ಲಾಂಚ್ ಆಗಲಿದೆ. ಈ ಚಿತ್ರದ ಟೈಟಲ್ನಲ್ಲಿ ಇನ್ಸ್ಟಾಗ್ರಾಮ್ ಖಾತೆ ಕೂಡ ಓಪನ್ ಆಗಲಿದೆ. ಮುಂದಿನ ದಿನಗಳಲ್ಲಿ ಸಿನಿಮಾಗೆ ಮತ್ತಷ್ಟು ಪ್ರಚಾರ ಕೊಡುವ ಆಲೋಚನೆ ರಂಜನಿ ರಾಘವನ್ ಅವರದ್ದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos