AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Final 2025-26: 5 ವಿಕೆಟ್​ಗಳ ಗೊಂಚಲು ಪಡೆದ ಪ್ರಸಿದ್ಧ್ ಕೃಷ್ಣ

Ranji Final 2025-26: 5 ವಿಕೆಟ್​ಗಳ ಗೊಂಚಲು ಪಡೆದ ಪ್ರಸಿದ್ಧ್ ಕೃಷ್ಣ

ಪೃಥ್ವಿಶಂಕರ
|

Updated on:Feb 26, 2026 | 3:45 PM

Share

Hubballi Ranji Final: 2025-26 ರ ರಣಜಿ ಟ್ರೋಫಿ ಫೈನಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹುಬ್ಬಳ್ಳಿಯಲ್ಲಿ ಕರ್ನಾಟಕದ ವಿರುದ್ಧ 584 ರನ್ ಗಳಿಸಿ ಬೃಹತ್ ಮೊತ್ತ ಪೇರಿಸಿದೆ. ಚೊಚ್ಚಲ ಫೈನಲ್ ಆಡುತ್ತಿರುವ ಜೆಕೆ ಪರ ಶುಭಂ ಪುಂಡಿರ್ ಶತಕ ಬಾರಿಸಿದರು. ಕರ್ನಾಟಕದ ಅನುಭವಿ ವೇಗಿ ಪ್ರಸಿದ್ಧ್ ಕೃಷ್ಣ 98 ರನ್‌ ನೀಡಿ 5 ವಿಕೆಟ್‌ಗಳ ಗೊಂಚಲು ಪಡೆದು ಮಿಂಚಿದರು. ಅವರ ನಾಲ್ಕನೇ ಪ್ರಥಮ ದರ್ಜೆ 5 ವಿಕೆಟ್ ಸಾಧನೆ ಇದು.

ಹುಬ್ಬಳ್ಳಿಯಲ್ಲಿ ನಡೆದ 2025-26 ರ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಜೆಕೆ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 584 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ಆಡುತ್ತಿರುವ ಜಮ್ಮು ಮತ್ತು ಕಾಶ್ಮೀರ ತಂಡವು, ಅನುಭವಿ ಬೌಲಿಂಗ್ ವಿಭಾಗವನ್ನು ಹೊಂದಿರುವ ಕರ್ನಾಟಕ ತಂಡವನ್ನು ಸಮರ್ಥವಾಗಿ ಎದುರಿಸಿತು. ತಂಡದ ಪರ ಶುಭಂ ಪುಂಡಿರ್ ಶತಕ ಬಾರಿಸಿದರೆ, ನಾಯಕ ಪರಾಸ್ ಡೋಗ್ರಾ ಸೇರಿದಂತೆ 4 ಬ್ಯಾಟ್ಸ್‌ಮನ್‌ಗಳು ಅರ್ಧಶತಕಗಳ ಬಾರಿಸಿದರು. ಇತ್ತ ಕರ್ನಾಟಕ ಪರ ಗಮನಾರ್ಹ ಪ್ರದರ್ಶನ ನೀಡಿದ ಅನುಭವಿ ವೇಗಿ ಪ್ರಸಿದ್ಧ್ ಕೃಷ್ಣ 5 ವಿಕೆಟ್‌ಗಳ ಗೊಂಚಲು ಪಡೆದರು.

527 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡುನ ಮೂರನೇ ದಿನದಾಟವನ್ನು ಆರಂಭಿಸಿದ ಜಮ್ಮು ಮತ್ತು ಕಾಶ್ಮೀರ 600 ರನ್‌ಗಳ ಗಡಿಯನ್ನು ಸುಲಭವಾಗಿ ಮೀರುತ್ತದೆ ಎಂದು ತೋರುತ್ತಿತ್ತು. ಆದಾಗ್ಯೂ, ಮೂರನೇ ದಿನದಂದು ಏಳು ಓವರ್‌ಗಳಲ್ಲಿ ಎರಡು ವಿಕೆಟ್‌ಗಳು ಬಿದ್ದವು, ಈ ಎರಡೂ ವಿಕೆಟ್‌ಗಳನ್ನು ಪ್ರಸಿದ್ಧ್ ಕೃಷ್ಣ ಉರುಳಿಸಿದರು. ಮಾತ್ರವಲ್ಲದೆ ಆಕಿಬ್ ನಬಿ ಅವರನ್ನು ಔಟ್ ಮಾಡುವ ಮೂಲಕ ಪ್ರಸಿದ್ಧ್ ತಮ್ಮ 5 ವಿಕೆಟ್ ಗೊಂಚಲನ್ನು ಪೂರ್ಣಗೊಳಿಸಿ ಈ ಫೈನಲ್ ಪಂದ್ಯವನ್ನು ಸ್ಮರಣೀಯವಾಗಿಸಿದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪ್ರಸಿದ್ಧ್ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದಿರುವುದು ಇದು ನಾಲ್ಕನೇ ಬಾರಿ. 34.1 ಓವರ್‌ಗಳ ಸ್ಪೆಲ್‌ನಲ್ಲಿ, ಪ್ರಸಿದ್ಧ್ 98 ರನ್‌ಗಳನ್ನು ನೀಡಿ 5 ವಿಕೆಟ್‌ಗಳನ್ನು ಪಡೆದರು. ಈ ಇನ್ನಿಂಗ್ಸ್‌ನಲ್ಲಿ ತಂಡದ ಪರ ಅತಿ ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದ ಎರಡನೇ ಬೌಲರ್ ಕೂಡ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 26, 2026 03:44 PM
Follow Us