ತಿಂಗಳಿಗೆ 4-5 ಸಲ ದುಬೈಗೆ ಹೋಗುತ್ತಿದ್ದ ರನ್ಯಾ ಇದಕ್ಕೆ ಮೊದಲು ಕಳುವಿನಿಂದ ತಂದ ಚಿನ್ನ ಎಲ್ಲಿಗೆ ಹೋಯಿತು? ಸುನೀಲ ಕುಮಾರ
ಕೇಂದ್ರದ ಏಜೆನ್ಸಿಗಳ ದೆಸೆಯಿಂದಾಗೇ ಪ್ರಕರಣ ಬೆಳಕಿಗೆ ಬಂದಿದೆ, ಅವು ತಮ್ಮ ಕೆಲಸ ಮಾಡುತ್ತಿವೆ, ಅದರೆ ಸರ್ಕಾರದ ನಿರ್ಲಿಪ್ತ ಧೋರಣೆ ಅರ್ಥವಾಗುತ್ತಿಲ್ಲ, ಸದನದಲ್ಲಿ ಕೇಳಿದ ಪ್ರಶ್ನೆಗಳಿಗೆ ಗೃಹ ಸಚಿವ ನಂಗೊತ್ತಿಲ್ಲ ಅನ್ನುತ್ತಾರೆ, ರನ್ಯಾ ರಾವ್ ಏರ್ಪೋರ್ಟ್ನಲ್ಲಿ ಅರೆಸ್ಟ್ ಆದ ಕೂಡಲೇ ಯಾರಿಗೋ ಫೋನ್ ಮಾಡಿದರಂತೆ, ಅವರು ಯಾರಿಗೆ ಫೋನ್ ಮಾಡಿದ್ದು, ಯಾಕೆ ಮಾಡಿದ್ದು ಅಂತ ಗೊತ್ತಾಗಬೇಕು ಎಂದು ಸುನೀಲ ಕುಮಾರ ಹೇಳಿದರು.
ಬೆಂಗಳೂರು: ಚಿತ್ರನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ (Ranya Rao gold smuggling case) ಸಂಬಂಧಿಸಿದಂತೆ ರಾಜ್ಯದ ಸಚಿವರು ಅದರಲ್ಲಿ ಭಾಗಿಯಾಗಿರುವ ಬಗ್ಗೆ ದಿನದಿನಕ್ಕೆ ಅನುಮಾನಗಳು ದಟ್ಟವಾಗುತ್ತಿವೆ ಎಂದು ಕಾರ್ಕಳ ಬಿಜೆಪಿ ಶಾಸಕ ಸುನೀಲ ಕುಮಾರ ಹೇಳಿದರು. ರನ್ಯಾ ತಿಂಗಳಿಗೆ 4-5 ಬಾರಿ ದುಬೈಗೆ ಹೋಗಿ ಬರುತ್ತಿದ್ದರಂತೆ, ಅಂದರೆ ಹಿಂದೆಲ್ಲ ಅವರು ಕಳ್ಳ ಸಾಗಾಣಿಕೆ ಮಾಡಿಕೊಂಡು ದೇಶಕ್ಕೆ ತೆಗೆದುಕೊಂಡು ಬಂದ ಚಿನ್ನ ಎಲ್ಲಿಗೆ ಹೋಯಿತು? ಅದು ಚಾಮರಾಜಪೇಟೆಗೆ ಹೋಯ್ತಾ ಅಥವಾ ಸದಾಶಿವನಗರಕ್ಕೆ ಹೋಯಿತಾ ಅನ್ನೋದು ಗೊತ್ತಾಗಬೇಕಿದೆ ಎಂದು ಸುನೀಲ ಕುಮಾರ ಹೇಳಿದರು. ಆಕೆಗೆ ಸರ್ಕಾರದಿಂದ ಯಾಕೆ ಪ್ರೋಟೋಕಾಲ್ ಸಿಗುತಿತ್ತು ಅನ್ನೋದು ಸಹ ಬೆಳಕಿಗೆ ಬರಬೇಕಿದೆ ಎಂದು ಶಾಸಕ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಹಿಂದಿರೋ ಸಚಿವರು ಯಾರು? ಸದನದಲ್ಲೂ ಸದ್ದು ಮಾಡಿದ ರನ್ಯಾ ರಾವ್ ಕೇಸ್