ಬೇಸಿಗೆಯ ಮೊದಲ ಮಳೆ ಸಿಂಚನ: ಕೆಂಡದಂಥಾ ಬಿಸಿಲಿಗೆ ಬಸವಳಿದ ಬೆಂಗಳೂರಿಗೆ ತಂಪೆರೆದ ಮಳೆರಾಯ
ಬಿರು ಬೇಸಿಗೆ ಬಿಸಿಲಿಗೆ ಬಸವಳಿದ ಬೆಂಗಳೂರಿಗೆ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ. ಹೌದು... ನಗರದ ಕೆಲ ಭಾಗಗಳಲ್ಲಿ ಇಂದು (ಮಾರ್ಚ್ 11) ಸಣ್ಣ ಪ್ರಮಾಣದ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿಗರು ಈ ಮಳೆ ಕಂಡು ಫುಲ್ ಖುಷ್ ಆಗಿದ್ದಾರೆ. ಹವಾಮಾನ ಇಲಾಖೆ ಸಹ ಮಳೆಯಾಗುವ ಸಾಧ್ಯತೆಗಳಿವೆ ಎಂದು ಮುನ್ಸೂಚನೆ ನೀಡಿತ್ತು. ಅದರಂತೆ ಇದೀಗ ಮಳೆಯಾಗಿದ್ದು ಜನ ಫುಲ್ ಖುಷ್ ಆಗಿದ್ದಾರೆ.
ಬೆಂಗಳೂರು, (ಮಾರ್ಚ್ 11): ಬಿರು ಬೇಸಿಗೆ ಬಿಸಿಲಿಗೆ ಬಸವಳಿದ ಬೆಂಗಳೂರಿಗೆ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ. ಹೌದು… ನಗರದ ಕೆಲ ಭಾಗಗಳಲ್ಲಿ ಇಂದು (ಮಾರ್ಚ್ 11) ಸಣ್ಣ ಪ್ರಮಾಣದ ಮಳೆಯಾಗಿದ್ದು, ಇದು ವರ್ಷದ ಮೊದಲ ಮಳೆಯಾಗಿದೆ. ಮೆಜೆಸ್ಟಿಕ್, ಗಾಂಧಿನಗರ, ಶಿವಾಜಿನಗರ, ಎಂಜಿ ರಸ್ತೆ, ಕಬ್ಬನ್ ಪಾರ್ಕ್, ಇಂದಿರಾನಗರ, ಹಲಸೂರು, ಬನಶಂಕರಿ, ಬಸವನಗುಡಿ, ಚಾಮರಾಜಪೇಟೆ, ಯಶವಂತಪುರ, ರಾಜಾಜಿ ನಗರ, ವಿಜಯ ನಗರ. ಹೊರ ವಲಯಗಳಾದ ಕೆಆರ್ ಪುರಂ, ಕನಕಪುರ ರಸ್ತೆ, ಮೈಸೂರು ರಸ್ತೆ ಸುತ್ತಮುತ್ತ ಬಡಾವಣೆಗಳಲ್ಲಿ ತುಸು ಮಳೆಯಾಗಿದೆ. ಬಿರು ಬೇಸಿಗೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರು ಈ ಮಳೆ ಕಂಡು ಫುಲ್ ಖುಷ್ ಆಗಿದ್ದಾರೆ.
Latest Videos