‘ಇದು ವಿಶೇಷ ರಿಂಗ್’; ಕೈಯಲ್ಲಿರೋ ಉಂಗುರದ ಗುಟ್ಟು ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

Edited By:

Updated on: Nov 04, 2025 | 10:06 AM

Rashmika Mandanna Engagement: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿದೆ. ಆರೆ, ಈ ವಿಚಾರದಲ್ಲಿ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಈಗ ಜೀ ತೆಲುಗು ವೇದಿಕೆ ಏರಿದ ಅವರು ಈ ಬಗ್ಗೆ ಮಾತನಾಡಿದರು.

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು ಎಂಬ ಸುದ್ದಿ ಹರಿದಾಡಿದೆ. ಆದರೆ, ಇದನ್ನು ಅವರು ಒಪ್ಪಿಕೊಂಡಿಲ್ಲ. ಈಗ ಅವರು ಜೀ ತೆಲುಗಿನ ಕಾರ್ಯಕ್ರಮ ಒಂದಕ್ಕೆ ಬಂದಿದ್ದಾರೆ. ಈ ಶೋನ ನಡೆಸಿಕೊಟ್ಟಿದ್ದು ಜಗಪತಿ ಬಾಬು ಅವರು. ಹಲವು ವಿಚಾರಗಳ ಬಗ್ಗೆ ಇಲ್ಲಿ ಚರ್ಚೆಗಳು ನಡೆದವು. ಇದೇ ವೇಳೆ ಕೈಯಲ್ಲಿರುವ ಉಂಗುರದ ಬಗ್ಗೆ ಅವರಿಗೆ ಕೇಳಲಾಯಿತು ಮತ್ತು ಅವರು ಉಂಗುರ ವಿಶೇಷ ಎಂದಷ್ಟೇ ಹೇಳಿದರು. ಇದು ಅವರ ಎಂಗೇಜ್​ಮೆಂಟ್ ರಿಂಗ್ ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Nov 04, 2025 09:06 AM
Follow Us
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More