Karnataka Assembly Session: ರತನ್ ಟಾಟಾ ಅವರ ಸಾವು ಉದ್ಯಮ ಕ್ಷೇತ್ರಕ್ಕೆ ಭರಿಸಲಾಗದ ನಷ್ಟವನ್ನುಂಟು ಮಾಡಿದೆ: ಸಿದ್ದರಾಮಯ್ಯ

Karnataka Assembly Session: ರತನ್ ಟಾಟಾ ಅವರ ಸಾವು ಉದ್ಯಮ ಕ್ಷೇತ್ರಕ್ಕೆ ಭರಿಸಲಾಗದ ನಷ್ಟವನ್ನುಂಟು ಮಾಡಿದೆ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 09, 2024 | 2:08 PM

ತಮ್ಮ ಆದಾಯದ ಹೆಚ್ಚಿನ ಭಾಗವನ್ನು ದಾನ ಮಾಡುತ್ತಿದ್ದ ಟಾಟಾ ಅವರು ಮಹಾ ಮಾನವತಾವಾದಿಯಾಗಿದ್ದರು ಮತ್ತು ಅವರನ್ನು ಕೇಂದ್ರ ಸರ್ಕಾರವು ಪದ್ಮ ಭೂಷಣ ಮತ್ತು ಪದ್ಮವಿಭೂಷಣ ಪುರಸ್ಕಾರಗಳನ್ನು ನೀಡಿ ಗೌರವಿಸಿತಲ್ಲದೆ ವಿಶ್ವದ ಹಲವಾರು ಪ್ರಶಸ್ತಿ ಮತ್ತು ಗೌರವ ಡಾಕ್ಟರೇಟ್ ಪದವಿಗಳು ಅವರಿಗೆ ಲಭ್ಯವಾಗಿದ್ದವು ಎಂದು ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ: ಸುವರ್ಣ ಸೌಧದಲ್ಲಿ ಇಂದು ಶುರುವಾದ ವಿಧಾನಸಭಾ ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಸಂತಾಪವನ್ನು ಸೂಚಿಸಲಾಯಿತು. ವಿಶ್ವದ ಖ್ಯಾತ ಉದ್ಯಮಿಯೆನಿಸಿಕೊಂಡಿದ್ದ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂಬೈನಲ್ಲಿ ಶಾಲಾ ಶಿಕ್ಷಣ ಪೂರೈಸಿದ ನಂತರ ಅವರು ಅಮೆರಿಕದ ವಿಶ್ವವಿದ್ಯಾಲಯವೊಂದರಿಂದ ಆರ್ಕಿಟೆಕ್ಚರ್ ನಲ್ಲಿ ಪದವಿ ಪಡೆದು ಭಾರತಕ್ಕೆ ವಾಪಸ್ಸಾಗಿ ಉದ್ಯಮದಲ್ಲಿ ತೊಡಗಿದರು, ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಕಡಿಮೆ ಬೆಲೆಯ ನ್ಯಾನೋ ಕಾರನ್ನು ಸೃಷ್ಟಿಸಿ ಕೆಳಮಧ್ಯಮ ವರ್ಗದ ಕುಟುಂಬಗಳು ಸಹ ಕಾರಲ್ಲಿ ಓಡಾಡುವ ಸನ್ನಿವೇಶ ಸೃಷ್ಟಿಸಿದರು, ಅವರ ಸಾವಿನಿಂದ ಉದ್ಯಮ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕಳಪೆ ಔಷಧ ಕೊಟ್ಟ ಕಂಪನಿ ಬ್ಲಾಕ್ ಲಿಸ್ಟ್​ಗೆ ಸೇರಿಸಲಾಗಿದೆ: ಸಿಎಂ ಸಿದ್ದರಾಮಯ್ಯ