Karnataka Assembly Session: ಸಂತಾಪ ಸೂಚಿಸುವ ಸಂದರ್ಭದಲ್ಲಿ ಗದ್ದಲ ಮಾಡುತ್ತಿದ್ದ ಶಾಸಕರನ್ನು ಗದರಿದ ಸ್ಪೀಕರ್ ಯುಟಿ ಖಾದರ್
ಸದನದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವಾಗ ಶಾಸಕರು ಮತ್ತು ಸಚಿವರು ತಮ್ಮ ಸ್ಥಾನಗಳನ್ನು ಬಿಟ್ಟು ಕದಲಿದ್ದು, ಮಾತಾಡಿದ್ದು ಹೇವರಿಕೆ ಹುಟ್ಟಿಸುವ ಸಂಗತಿ, ಸರ್ಕಾರೀ ಶಾಲೆಗಳಲ್ಲಿ ಓದುವ ಮಕ್ಕಳು ಸಹ ಸಂತಾಪ ಸೂಚಕ ಸಂದರ್ಭಗಳಲ್ಲಿ ಮೌನವಾಗಿ ಕುಳಿತಿರುತ್ತಾರೆ. ಜನಕ್ಕೆ ಮಾದರಿ ಅಗಬೇಕಿರುವ ಜನಪ್ರತಿನಿಧಿಗಳು ಹೀಗೆ ಜನತರಾಡಿಕೊಳ್ಳುವ ವರ್ತನೆ ಪ್ರದರ್ಶಿಸುವುದು ನಾಚಿಗ್ಗೇಡು.
ಬೆಳಗಾವಿ: ಸದನದ ಕಲಾಪ ನಡೆಯುವಾಗ ಸ್ಪೀಕರ್ ಯುಟಿ ಖಾದರ್ ಕೋಪಗೊಳ್ಳೋದು ವಿರಳ ಸಂದರ್ಭಗಳಲ್ಲಿ ಮಾತ್ರ. ಬೆಳಗಾವಿ ಅಧಿವೇಶನದ ಮೊದಲ ದಿನವಾಗಿರುವ ಇಂದು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಸಂದರ್ಭದಲ್ಲಿ ಅವರು ಒಬ್ಬ ಸಚಿವ ಹಾಗೂ ಕೆಲ ಕಾಂಗ್ರೆಸ್ ಶಾಸಕರ ವರ್ತನೆಯಿಂದ ಅಸಮಾಧಾನಗೊಂಡು ಗದರಿದ ಪ್ರಸಂಗ ನಡೆಯಿತು. ಹಿರಿಯ ಶಾಸಕ ಕೆಎಂ ಶಿವಲಿಂಗೇಗೌಡ ಅವರು ಮಾಜಿ ಸಚಿವ ಕೆ ಹೆಚ್ ಶ್ರೀನಿವಾಸ್ ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾಗ ಎನ್ ಚಲುರಾಯಸ್ವಾಮಿ, ಎನ್ ಎ ಹ್ಯಾರಿಸ್, ಇಕ್ಬಾಲ್ ಹುಸ್ಸೇನ್ ಮತ್ತು ವೆಂಕಟೇಶ್ವರ ರೆಡ್ಡಿ ಸ್ಥಳ ಬಿಟ್ಟು ಕದಲುವುದು ಮತ್ತು ಮಾತಾಡುವುದನ್ನು ಗಮನಿಸಿದ ಸ್ಪೀಕರ್ ಅವರನ್ನು ಮುಲಾಜಿಲ್ಲದೆ ಗದರಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸ್ಪೀಕರ್ ಆಗಿ ಕೆಟ್ಟ ಸಂಪ್ರದಾಯ ಮುಂದುವರಿಸಲ್ಲ: ಬಿಜೆಪಿ ಜೆಡಿಎಸ್ ಧರಣಿ ಬಗ್ಗೆ ಯುಟಿ ಖಾದರ್ ಖಡಕ್ ಸಂದೇಶ
Latest Videos