Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Session: ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮುಡಾ ಹಗರಣ ವೃಥಾಚರ್ಚೆ ಎನ್ನುತ್ತಾರೆ ಶಾಸಕ ಪ್ರದೀಪ್ ಈಶ್ವರ್!

Karnataka Assembly Session: ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮುಡಾ ಹಗರಣ ವೃಥಾಚರ್ಚೆ ಎನ್ನುತ್ತಾರೆ ಶಾಸಕ ಪ್ರದೀಪ್ ಈಶ್ವರ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 09, 2024 | 12:20 PM

ತಮ್ಮ ಸರ್ಕಾರ ಸುಭಧ್ರವಾಗಿದೆ ಎಂದು ಹೇಳುವ ಪ್ರದೀಪ್ ಈಶ್ವರ್, ವಿರೋಧ ಪಕ್ಷದವರು ಕಳೆದ ಅಧಿವೇಶನದಲ್ಲಿ ಮುಡಾ ಪ್ರಕರಣವನ್ನು ಪ್ರಸ್ತಾಪಿಸುತ್ತ ವೃಥಾ ಕಾಲಹರಣ ಮಾಡಿದರು ಎನ್ನುತ್ತಾರೆ. ಪ್ರಕರಣದ ತನಿಖೆಯನ್ನು ಎರಡು ತನಿಖಾ ಸಂಸ್ಥೆಗಳು ನಡೆಸುತ್ತಿವೆ ಮತ್ತು ಪಾರ್ವತಿ ಸಿದ್ದರಾಮಯ್ಯನವರಿಗೆ ಅಲಾಟ್ ಆಗಿದ್ದ ಸೈಟುಗಳನ್ನು ಸಿಎಂ ವಾಪಸ್ಸು ನೀಡಿದ್ದಾರೆ, ಅದರೂ ಚರ್ಚೆಯನ್ನು ಪ್ರದೀಪ್ ವೃಥಾ ಕಾಲಹಣರವೆನ್ನುತ್ತಾರೆ!

ಬೆಳಗಾವಿ: ಸುವರ್ಣ ಸೌಧದಲ್ಲಿ ಅಧಿವೇಶನ ಶುರುವಾಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಯಾಗಲೆಂದೇ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುತ್ತದೆ, ಎಲ್ಲ ವಿಷಯಗಳ ಮೇಲೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಾಗಿದೆ, ವಿರೋಧ ಪಕ್ಷಗಳು ಸೈದ್ಧಾಂತಿಕ ಹಿನ್ನೆಲೆಯಲ್ಲಿ ಚರ್ಚೆ ನಡೆಸಲಿ, ಉತ್ತರ ನೀಡಲು ತಮ್ಮ ಸರ್ಕಾರ ಸಿದ್ಧವಿದೆ, ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಗಳ ಫಲಿತಾಂಶ ಜನ ತಮ್ಮೊಂದಿಗೊಂದಿಗೆ ಇದ್ದಾರೆನ್ನುವುದರ ಸೂಚಕವಾಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಿಕ್ಕಬಳ್ಳಾಪುರ: ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ