‘ತ್ರಿವಿಕ್ರಮ’ ಸಿನಿಮಾ ರಿಲೀಸ್​ಗೂ ಮುನ್ನ ದೇವರ ಮೊರೆ ಹೋದ ವಿಕ್ರಮ್​ ರವಿಚಂದ್ರನ್

‘ತ್ರಿವಿಕ್ರಮ’ ಸಿನಿಮಾ ರಿಲೀಸ್​ಗೂ ಮುನ್ನ ದೇವರ ಮೊರೆ ಹೋದ ವಿಕ್ರಮ್​ ರವಿಚಂದ್ರನ್

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 13, 2022 | 1:50 PM

‘ತ್ರಿವಿಕ್ರಮ’ (Trivikrama Movie)ಬಿಡುಗಡೆಗೆ ಸಜ್ಜಾಗಿದೆ. ಜೂನ್​ 24ರಂದು ‘ತ್ರಿವಿಕ್ರಮ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾ ಪ್ರಚಾರ ಕಾರ್ಯ ಭರದಿಂದ ಸಾಗಿದೆ.

ಸ್ಯಾಂಡಲ್​ವುಡ್​ನ ಹಿರಿಯ ನಟ ರವಿಚಂದ್ರನ್ ಅವರ (Ravichandran) ಮೊದಲ ಪುತ್ರ ಮನುರಂಜನ್​ ರವಿಚಂದ್ರನ್​ ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎರಡನೇ ಪುತ್ರ ವಿಕ್ರಮ್​ ರವಿಚಂದ್ರನ್ (Vikram Ravichandran)​ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರು ನಟಿಸಿರುವ ಮೊದಲ ಸಿನಿಮಾ ‘ತ್ರಿವಿಕ್ರಮ’ (Trivikrama Movie)ಬಿಡುಗಡೆಗೆ ಸಜ್ಜಾಗಿದೆ. ಜೂನ್​ 24ರಂದು ‘ತ್ರಿವಿಕ್ರಮ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಈ ಮಧ್ಯೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ಕಾರ್ಯ ಆಗುತ್ತಿದೆ. ‘ತ್ರಿವಿಕ್ರಮ’ ಚಿತ್ರತಂಡ ದಾವಣಗೆರೆಗೆ ಭೇಟಿ ನೀಡಿದೆ. ದಾವಣಗೆರೆಯ ಶಿವಾಜಿ ನಗರದಲ್ಲಿರುವ  ದುರ್ಗಾಂಬಿಕಾ ದೇವಸ್ಥಾನಕ್ಕೆ ಇಡೀ ಟೀಂ ತೆರಳಿ ಪೂಜೆ ಸಲ್ಲಿದೆ. ಸಿನಿಮಾ ಬಿಡುಗಡೆಗೂ ಮೊದಲು ಪ್ರಮುಖ ನಗರಗಳಿಗೆ ಭೇಟಿ ನೀಡುವ ಪ್ಲ್ಯಾನ್​​ನಲ್ಲಿ ಚಿತ್ರತಂಡ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.