Bengaluru Stampede; ಕನ್ನಡಿಗರೇ ಇಲ್ಲದ ಆರ್​ಸಿಬಿ ತಂಡಕ್ಕೆ ಸಿಎಂ ಮಟ್ಟದಲ್ಲಿ ಸನ್ಮಾನ ಬೇಕಿರಲಿಲ್ಲ: ಹಿರಿಯ ನಾಗರಿಕ

ಅರುಣ್​ ಕುಮಾರ್​ ಬೆಳ್ಳಿ

Updated on: Jun 05, 2025 | 5:31 PM

ಸನ್ಮಾನ ಸಮಾರಂಭವನ್ನು ಸರ್ಕಾರವನ್ನು ವ್ಯವಸ್ಥಿತವಾಗಿ ಅಯೋಜಿಸದ ಕಾರಣ, ಜನ ಪ್ರಾಣ ಕಳೆದುಕೊಂಡರು ಮತ್ತು ಹಲವಾರು ಜನ ಗಾಯಗೊಂಡರು. ಸಮಾರಂಭಕ್ಕೆ ಮಿನಿಸ್ಟ್ರಗಳ ಕುಟುಂಬಗಳು ಬಂದಿದ್ದವು, ಇದು ಚೀಫ್ ಮಿನಿಸ್ಟ್ರು ಹೆಸರಲ್ಲಿ ನಡೆಯುವ ಕಾರ್ಯಕ್ರಮವಾಗದೆ ಚೀಪ್ ಕಾರ್ಯಕ್ರಮ ಅನಿಸಿಕೊಂಡಿತು, ಸರ್ಕಾರದ ತಪ್ಪಿನಿಂದಾಗಿ ಜನ ಪ್ರಾಣ ಕಳೆದುಕೊಂಡರು ಎಂದು ಹಿರಿಯ ನಾಗರಿಕ ಹೇಳಿದರು.

ಬೆಂಗಳೂರು, ಜೂನ್ 5: ಬುಧವಾರ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ದುರಂತದಲ್ಲಿ ಮಡಿದವರ ಕುಟುಂಬಸ್ಥರು, ಆಪ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಧ್ಯಮಗಳೊಂದಿಗೆ ಮಾತಾಡುತ್ತಿರುವ ಹಿರಿಯ ವ್ಯಕ್ತಿಯೊಬ್ಬರು ಕೆಲಸ ಮಾಡುವ ಸಂಸ್ಥೆಯಲ್ಲೇ ನಿನ್ನೆಯ ದುರ್ಘಟನೆಯಲ್ಲಿ ಮಡಿದ ಚಿನ್ಮಯಿ ಶೆಟ್ಟಿಯ ತಂದೆ ಮ್ಯಾನೇಜರ್ ಅಗಿ ಕೆಲಸ ಮಾಡುತ್ತಾರೆ. ಇವರು ಹೇಳುವ ಪ್ರಕಾರ ಒಬ್ಬೇಒಬ್ಬ ಕನ್ನಡಿಗನಿಲ್ಲದ ಅರ್​ಸಿಬಿ ತಂಡದ ಸದಸ್ಯರಿಗೆ ಮುಖ್ಯಮಂತ್ರಿಯವರ ಮಟ್ಟದಲ್ಲಿ ಸನ್ಮಾನ ಮಾಡುವ ಅವಶ್ಯಕತೆಯಿರಲಿಲ್ಲ. ಅರ್​ಸಿಬಿ ಒಂದು ಸಣ್ಣ ಸಂಸ್ಥೆ, ಅದೊಂದು ಕ್ಲಬ್ ಅಷ್ಟೇ, ಅದರೆ ಕರ್ನಾಟಕ ಸರ್ಕಾರ ರಾಜಕೀಯ ಲಾಭಗಳಿಗಾಗಿ ಸತ್ಕಾರ ಕೂಟ ಏರ್ಪಡಿಸಿತ್ತು ಎಂದು ಅವರು ಹೇಳಿದರು.

ಇದನ್ನೂ ಓದಿ:  Bengaluru Stampede; ಮನೋಜ್ ಬಗ್ಗೆ ಇಟ್ಟುಕೊಂಡಿದ್ದ ಕನಸುಗಳೆಲ್ಲ ನುಚ್ಚುನೂರು, ತಂದೆಯ ಆಕ್ರಂದನ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jun 05, 2025 03:52 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.