ತಿರುಮಲ ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು

Updated on: Apr 04, 2026 | 1:05 PM

RCB vs CSK: ಏಪ್ರಿಲ್ 5 ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಆಟಗಾರರು ಶ್ರೀವಾರಿ ಆಶೀರ್ವಾದ ಪಡೆದರು. ವಿಶೇಷ ಎಂದರೆ ಕಳೆದ ವರ್ಷವೂ ಸಹ ತಂಡದ ಪ್ರಮುಖ ಆಟಗಾರರು ತಿರುಮಲಕ್ಕೆ ಭೇಟಿ ನೀಡಿದ್ದರು, ಅದು ತಂಡಕ್ಕೆ ಅದೃಷ್ಟ ತಂದಿತ್ತು ಎಂಬ ನಂಬಿಕೆ ಅಭಿಮಾನಿಗಳಲ್ಲಿದೆ.

ಐಪಿಎಲ್ 2026ರ ಭರ್ಜರಿ ಆರಂಭದ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಾಟಿದಾರ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಶನಿವಾರ ಆಂಧ್ರಪ್ರದೇಶದ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಳೆದ ಸೀಸನ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದಿದ್ದ ಆರ್‌ಸಿಬಿ, ಈ ಬಾರಿಯೂ ಅಮೋಘ ಪ್ರದರ್ಶನ ನೀಡುತ್ತಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ನಂತರ, ತಂಡದ ಪ್ರಮುಖ ಆಟಗಾರರು ಆಧ್ಯಾತ್ಮಿಕ ಚಿಂತನೆಯತ್ತ ಮುಖ ಮಾಡಿದ್ದಾರೆ.

ಏಪ್ರಿಲ್ 5 ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಆಟಗಾರರು ಶ್ರೀವಾರಿ ಆಶೀರ್ವಾದ ಪಡೆದರು. ವಿಶೇಷ ಎಂದರೆ ಕಳೆದ ವರ್ಷವೂ ಸಹ ತಂಡದ ಪ್ರಮುಖ ಆಟಗಾರರು ತಿರುಮಲಕ್ಕೆ ಭೇಟಿ ನೀಡಿದ್ದರು, ಅದು ತಂಡಕ್ಕೆ ಅದೃಷ್ಟ ತಂದಿತ್ತು ಎಂಬ ನಂಬಿಕೆ ಅಭಿಮಾನಿಗಳಲ್ಲಿದೆ. ಇದೀಗ ಸಿಎಸ್​ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ತಿಮ್ಮಪ್ಪನ ದರ್ಶನ ಪಡೆದಿರುವುದು ವಿಶೇಷ.

 

Loading...
Unable to load recommendations.
Follow Us