ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ….

ವಿವೇಕ ಬಿರಾದಾರ

Updated on: Jun 03, 2025 | 11:55 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಐಪಿಎಲ್ ಚಾಂಪಿಯನ್‌ಷಿಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 18 ವರ್ಷಗಳ ನಂತರ ಈ ಗೆಲುವು RCB ಅಭಿಮಾನಿಗಳಿಗೆ ಅಪಾರ ಸಂತೋಷ ತಂದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಉದ್ವಿಗ್ನ ಪಂದ್ಯದಲ್ಲಿ RCB ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.

ಪಂಜಾಬ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಭರ್ಜರಿ ಗೆಲವು ಸಾಧಿಸಿದೆ. ಈ ಮೂಲಕ ಆರ್​ಸಿಬಿ 17 ವರ್ಷಗಳ ನಂತರ ಐಪಿಎಲ್​ ಚಾಂಪಿಯನ್ಸ್​ ಟ್ರೋಫಿಗೆ ಮುತ್ತಿಟ್ಟಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ಪಂಜಾಬ್​ ವಿರುದ್ಧ 6 ರನ್​ಗಳ ಅಂತರದಿಂದ ಗೆಲವು ಸಾಧಿಸಿದೆ.

Published on: Jun 03, 2025 11:36 PM
Follow Us
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.