ಇನ್ನೆರಡು ದಿನಗಳಲ್ಲಿ ಜಿಟಿ2 ಪ್ರೋ ಲಾಂಚ್ ಮಾಡಲಿದೆ ರಿಯಲ್ಮಿ, ಜಿಟಿ2 ಮಾಡೆಲ್ ಇನ್ನೂ ಅಸ್ತಿತ್ವದಲ್ಲಿರರುವ ಸುಳಿವು ಸಿಕ್ಕಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 18, 2021 | 9:36 PM

ಹಾಗೆಯೇ, ಜಿಟಿ2 ಮಾಡೆಲ್ ಅಸ್ತಿತ್ವದ ಬಗ್ಗೆ ಹಲವು ಸಂದೇಹಗಳು ಹುಟ್ಟಿಕೊಂಡಿದ್ದವು. ಆದರೆ ಅದು ಅಸ್ತಿತ್ವದಲ್ಲಿದೆ ಅನ್ನವುದಕ್ಕೆ ಕೆಲವು ಸ್ಪಷ್ಟ ಸೂಚನೆಗಳು ಸಹ ನಮಗೆ ಸಿಕ್ಕಿವೆ.

ಸ್ನಾಪ್‌ಡ್ರಾಗನ್ 8 ಜೆನ್1-ಚಾಲಿತ ಕಾರ್ಯಕ್ಷಮತೆಯ ಮೂಲ ಉದಾಹರಣೆಯಾಗಿರುವ ಸ್ಮಾರ್ಟ್‌ಫೋನ್ ಜಿಟಿ2 ಪ್ರೊ ಫೋನನ್ನು ಡಿಸೆಂಬರ್ 20, 2021 ರಂದು ಅನಾವರಣಗೊಳಿಸಲಾಗುವುದು ಎಂದು ರೀಯಲ್ಮಿ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಅದಾದ ಮೇಲೆ, ಮೂಲ ಉಪಕರಣ ತಯಾರಿಸುವ ಸಂಸ್ಥೆಯು ಸಂಪೂರ್ಣ ಜಿಟಿ2 ಸರಣಿಯನ್ನು ಉಲ್ಲೇಖಿಸುವ ಟೀಸರ್‌ಗಳನ್ನು ಬಹಿರಂಗಪಡಿಸಿದೆ. ಸೋರಿಕೆ ಮೂಲಕ ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಟಾಪ್-ಎಂಡ್ ಪ್ರೊ ಜೊತೆಗೆ ಕನಿಷ್ಟ ವೆನಿಲ್ಲಾ ರೂಪಾಂತರದ ಫೋನ್ ಮಾರ್ಕೆಟ್ಗೆ ಪದಾರ್ಪಣೆ ಮಾಡಲಿದೆ

ಹಾಗೆಯೇ, ಜಿಟಿ2 ಮಾಡೆಲ್ ಅಸ್ತಿತ್ವದ ಬಗ್ಗೆ ಹಲವು ಸಂದೇಹಗಳು ಹುಟ್ಟಿಕೊಂಡಿದ್ದವು. ಆದರೆ ಅದು ಅಸ್ತಿತ್ವದಲ್ಲಿದೆ ಅನ್ನವುದಕ್ಕೆ ಕೆಲವು ಸ್ಪಷ್ಟ ಸೂಚನೆಗಳು ಸಹ ನಮಗೆ ಸಿಕ್ಕಿವೆ. ರಿಯಲ್ಮಿ ಇಂಡಿಯಾದ ವೆಬ್‌ಸೈಟ್‌ನ ಕೋಡ್‌ನಲ್ಲಿ ಈ ಮಾಡೆಲ್ನ ಉಲ್ಲೇಖವನ್ನು ಕಂಡುಕೊಂಡಿರುವುದಾಗಿ ಕಂಪನಿಗಳ ಮಾಹಿತಿಯನ್ನು ಲೀಕ್ ಮಾಡುವುದರಲ್ಲಿ ಸಿದ್ಧಹಸ್ತರೆನಿಸಿಕೊಂಡಿರುವ ಮುಕುಲ್ ಶರ್ಮಾ ಹೇಳಿಕೊಂಡಿದ್ದಾರೆ.

ಹಾಗಾಗಿ, ನಾವು ಗೊತ್ತು ಮಾಡಿಕೊಳ್ಳಬೇಕಿರುವ ಅಂಶವೇನೆಂದರೆ ಜಿಟಿಯ ನೇರ ಉತ್ತರಾಧಿಕಾರಿಯು ಮುಂದಿನ ವಾರದಲ್ಲಿ ಕನಿಷ್ಠ ಒಂದು ದೇಶದಲ್ಲಿ ಲಾಂಚ್ ಆಗಲಿದೆ.

ಮತ್ತೊಂದೆಡೆ, ಅದರ ಹೆಸರಿನ ಹೊರತಾಗಿ ಪ್ರಸ್ತಾಪಿತ ವೆನಿಲ್ಲಾ ಫ್ಲ್ಯಾಗ್‌ಶಿಪ್ ಬಗ್ಗೆ ಹೆಚ್ಚಿನ ಮಾಹಿತಿ ನಮಗೆ ಲಭ್ಯವಿಲ್ಲ. ಉದಾಹರಣೆಗೆ, ಅದರ ಸರಣಿಗಾಗಿ ಮೀಸಲಾಗಿರುವ 3 ಆವಿಷ್ಕಾರಗಳನ್ನು ಪಡೆಯಲಿದೆಯೇ ಅಥವಾ ಅದನ್ನು ಪ್ರೊ ಮಾಡೆಲ್ಗಾಗಿ ಕಾಯ್ದಿರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ:   Viral Video: ಮದುವೆ ಮಂಟಪದಲ್ಲಿ ಫೋಟೋ ತೆಗೆಸಿಕೊಳ್ಳುವ ವೇಳೆ ವರನ ಕಾಲಿನಲ್ಲಿದ್ದ ಶೂ ಕಳ್ಳತನ; ವೈರಲ್ ವಿಡಿಯೋ ನೋಡಿ