Realme Buds Wireless 3: ಹೊಸ ವೈರ್​ಲೆಸ್ ಬಡ್ಸ್ ನೆಕ್​ಬ್ಯಾಂಡ್ ಪರಿಚಯಿಸಿದೆ ರಿಯಲ್​ಮಿ

|

Updated on: Jul 10, 2023 | 6:38 PM

ಹೊಸ ಬಡ್ಸ್ ವೈರ್​ಲೆಸ್ 3 ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಮತ್ತು 40 ಗಂಟೆಗಳ ಬ್ಯಾಟರಿ ಬಾಳಿಕೆಯೊಂದಿಗೆ ಗ್ಯಾಜೆಟ್ ಲೋಕದಲ್ಲಿ ದೊರೆಯುತ್ತಿದೆ. ಹೊಸ ಬಡ್ಸ್ ಬೆಲೆ ಮತ್ತು ಇತರ ವಿವರಗಳು ವಿಡಿಯೊದಲ್ಲಿದೆ.

ರಿಯಲ್​ಮಿ ಕಂಪನಿ ಕ್ಯಾಮೆರಾ ಆಧಾರಿತ ಹೊಸ ವೈಶಿಷ್ಟ್ಯಗಳನ್ನು ಸ್ಮಾರ್ಟ್​ಫೋನ್​ನಲ್ಲಿ ಪರಿಚಯಿಸಿದ ಬಳಿಕ ಆಡಿಯೋ ವಲಯದತ್ತ ಗಮನ ಹರಿಸಿದೆ. ಈ ಬಾರಿ ಹೊಸ ಬಡ್ಸ್ ಸರಣಿಯಲ್ಲಿ ರಿಯಲ್​ಮಿ ಬಡ್ಸ್ ವೈರ್​ಲೆಸ್ 3 ಬಿಡುಗಡೆಯಾಗಿದೆ. ರಿಯಲ್​ಮಿ ಕಂಪನಿಯ ವಿವಿಧ ಫೋನ್​ಗಳು ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿವೆ. ಹೊಸ ಬಡ್ಸ್ ವೈರ್​ಲೆಸ್ 3 ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಮತ್ತು 40 ಗಂಟೆಗಳ ಬ್ಯಾಟರಿ ಬಾಳಿಕೆಯೊಂದಿಗೆ ಗ್ಯಾಜೆಟ್ ಲೋಕದಲ್ಲಿ ದೊರೆಯುತ್ತಿದೆ. ಹೊಸ ಬಡ್ಸ್ ಬೆಲೆ ಮತ್ತು ಇತರ ವಿವರಗಳು ವಿಡಿಯೊದಲ್ಲಿದೆ.