ರಿಯಲ್ಮಿ ನಾರ್ಜೊ 50 ಸಿರೀಸ್ ಫೋನ್​ಗಳು ಭಾರತದಲ್ಲಿ ಬಿಡುಗಡೆ, ಆಕ್ಟೋಬರ್ 7 ರಿಂದ ಆನ್​ಲೈನ್​​ನಲ್ಲೂ ಲಭ್ಯ

ರಿಯಲ್ಮಿ ನಾರ್ಜೊ 50 ಸಿರೀಸ್ ಫೋನ್​ಗಳು ಭಾರತದಲ್ಲಿ ಬಿಡುಗಡೆ, ಆಕ್ಟೋಬರ್ 7 ರಿಂದ ಆನ್​ಲೈನ್​​ನಲ್ಲೂ ಲಭ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 27, 2021 | 4:55 PM

ರೀಯಲ್ಮಿ ನಾರ್ಜೊ 50 ಎ ಫೋನ್​ಗಳ ಬೆಲೆ ಬಗ್ಗೆ ಮಾತಾಡುವುದಾರೆ, 4 ಜಿಬಿ ರ‍್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ವೇರಿಯಂಟ್ ಬೆಲೆ ರೂ. 11,499 ಮತ್ತು 4ಜಿಬಿ ರ‍್ಯಾಮ್ + 128ಜಿಬಿ ವೇರಿಯಂಟ್ ಬೆಲೆ 12,499 ಆಗಿದೆ

ಈ ತಿಂಗಳು ಮಾರ್ಕೆಟ್ ಬಿಡುಗಡೆಯಾಗಿರುವ ಹೊಸ ಪ್ರಾಡಕ್ಟ್ಗಳು ಲೆಕ್ಕಕ್ಕೆ ಸಿಗುತ್ತಿಲ್ಲ. ನಾವು ಕಳೆದ ವಾರ ಚರ್ಚಿಸಿದ್ದ ರಿಯಲ್ಮಿ ನಾರ್ಜೊ 50 ಸಿರೀಸ್ ಸೆಪ್ಟೆಂಬರ್ 24 ರಂದು ಭಾರತದಲ್ಲಿ ಲಾಂಚ್ ಆಗಿದೆ. ರಿಯಲ್ಮಿ ನಾರ್ಜೊ 50 ಸಿರೀಸ್ ಒಂದಿಗೆ ರಿಯಲ್ಮಿ ಬ್ಯಾಂಡ್ 2 ಮತ್ತು ರಿಯಲ್ಮಿ ಸ್ಮಾರ್ಟ್ ಟಿವಿ ನಿಯೋ 32-ಇಂಚ್ ಸಹ ಇದೇ ದಿನ ಲಾಂಚ್ ಆಗಿವೆ. ನಾರ್ಜೊ 50 ಸಿರೀಸ್ ನಲ್ಲಿ ರೀಯಲ್ಮಿ ಎರಡು ಪೋನ್ಗಳನ್ನು ಮಾರ್ಕೆಟ್ ಗೆ ಬಿಡುಗಡೆ ಮಾಡಿದೆ- ರೀಯಲ್ಮಿ ನಾರ್ಜೊ 50 ಮತ್ತು ನಾರ್ಜೊ 50 ಪ್ರೊ. ನಮಗೆ ಲಭ್ಯವಾಗಿರುವ ಒಂದು ಮಾಹಿತಿಯ ಪ್ರಕಾರ ರಿಯಲ್ಮಿ ನಾರ್ಜೊ 50 ಎ ಮಾಡೆಲ್ ತಯಾರಿಕೆ ಹಂತದಲ್ಲಿದೆ.

ರೀಯಲ್ಮಿ ನಾರ್ಜೊ 50 ಎ ಫೋನ್​ಗಳ ಬೆಲೆ ಬಗ್ಗೆ ಮಾತಾಡುವುದಾರೆ, 4 ಜಿಬಿ ರ‍್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ವೇರಿಯಂಟ್ ಬೆಲೆ ರೂ. 11,499 ಮತ್ತು 4ಜಿಬಿ ರ‍್ಯಾಮ್ + 128ಜಿಬಿ ವೇರಿಯಂಟ್ ಬೆಲೆ 12,499 ಆಗಿದೆ. ಈ ಫೋನ್ಗಳು ಎರಡು ಬಣ್ಣಗಳಲ್ಲಿ ಲಾಂಚ್ ಆಗಿವೆ-ಆಕ್ಸಿಜನ್ ನೀಲಿ ಮತ್ತು ಆಕ್ಸಿಜನ್ ಹಸಿರು.

ರಿಯಲ್ಮಿ ನಾರ್ಜೊ 50ಐ ದರವನ್ನು ಕೈಗೆಟಕುವಂತೆ ನಿಗದಿಪಡಿಸಲಾಗಿದೆ. 2 ಜಿಬಿ ರ‍್ಯಾಮ್ + 32 ಜಿಬಿ ವೇರಿಯಂಟ್ ಬೆಲೆ 7,499 ಆದರೆ, 4 ಜಿಬಿ ರ‍್ಯಾಮ್+ 64 ಜಿಬಿ ವೇರಿಯಂಟ್ ಬೆಲೆ 8,499 ಆಗಿದೆ. ಈ ಫೋನು ಮಿಂಟ್ ಕಾರ್ಬನ್ ಕಪ್ಪು ಬಣ್ಣದಲ್ಲಿ ಲಭ್ಯವಿದೆ.

ಅಕ್ಟೋಬರ್ 7 ರಿಯಲ್ಮಿ. ಕಾಮ್, ಇ-ಕಾಮರ್ಸ್ ಪ್ಲ್ಯಾಟ್ ಫಾರ್ಮ್ ಆಗಿರುವ ಫ್ಲಿಪ್ ಕಾರ್ಟ್ ಮತ್ತು ಬ್ರ್ಯಾಂಡ್ನೊಂದಿಗೆ ಸಹಯೋಗ ಹೊಂದಿರುವ ಮೇನ್ ಲೈನ್ ಚ್ಯಾನೆಲ್ ಗಳಲ್ಲಿ ಸಹ ಪೋನ್​ಗಳು ಲಭ್ಯವಾಗಲಿವೆ.

ಇದನ್ನೂ ಓದಿ: ಶಾಲೆಯ ತರಗತಿಯಲ್ಲಿ ಹಿಂದಿ ಹಾಡಿಗೆ ಭರ್ಜರಿ ಕುಣಿದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಶಿಕ್ಷಕಿಯರು ಅಮಾನತು