ಹೊಯ್ಸಳ ಪದ ಹುಟ್ಟಿಗೆ ಕಾರಣವೇನು ಗೊತ್ತಾ? ವಸಂತಿಕಾದೇವಿ ದೇವಾಲಯದ ಇತಿಹಾಸ ಇಲ್ಲಿದೆ

| Updated By: ಆಯೇಷಾ ಬಾನು

Updated on: Sep 20, 2021 | 6:56 AM

ಸಳನ ನಿಜವಾದ ಹೆಸರು ನೃಪಕಾಮ, ಅಂಗಡಿಯ ಮೂಲ ಹೆಸರು ಶಶಕಪುರ. ಹೊಯ್ಸಳ ಶಬ್ದ ಹುಟ್ಟಿ, ನೃಪಕಾಮ ರಾಜನಾಗಲು ಕಾರಣಿಭೂತವಾದ ಸ್ಥಳ ವಸಂತಿಕಾದೇವಿ ದೇವಸ್ಥಾನ.

ಚಿಕ್ಕಮಗಳೂರು: ಹೊಯ್ಸಳರ ಮೂಲಸ್ಥಾನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮಲ್ಲಿದೆ ಪುರಾತನ ವಸಂತಿಕಾದೇವಿ ದೇವಸ್ಥಾನ. ಅಂಗಡಿ ಗುರುಕುಲದಲ್ಲಿ ಪಾಠ ನಡೆಯುವಾಗ ಹುಲಿಯೊಂದು ಅಲ್ಲಿಗೆ ಬರುತ್ತದೆ. ಆ ವೇಳೆ ಗುರು ಸುದತ್ತಚಾರ್ಯರಿಂದ ಶಿಷ್ಯ ಸಳನಿಗೆ ಹುಲಿ ಓಡಿಸಲು ಸೂಚನೆ ನೀಡುತ್ತಾರೆ. ಪೊಯ್ ಸಳ (ಸಳ ಹೊಡಿ) ಅಂತಾ ಹುಲಿಯನ್ನ ಹೊಡೆಯಲು ಹೇಳುತ್ತಾರೆ. ಹುಲಿಯನ್ನ ಸಂಹಾರ ಮಾಡುವ ಸಳನನ್ನ ಕಲ್ಯಾಣಿ ಚಾಲುಕ್ಯರು ರಾಜನಾಗಿ ಮಾಡುತ್ತಾರೆ. ಈ ರೀತಿ ಮೊಟ್ಟ ಮೊದಲ ಬಾರಿಗೆ ಹೊಯ್(ಪೊಯ್) ಸಳ ಶಬ್ದ ಹುಟ್ಟಿ ಹೊಯ್ಸಳ ಆಗಿ ಮಾರ್ಪಾಡಾಗುತ್ತದೆ. ಸಳನ ನಿಜವಾದ ಹೆಸರು ನೃಪಕಾಮ, ಅಂಗಡಿಯ ಮೂಲ ಹೆಸರು ಶಶಕಪುರ. ಹೊಯ್ಸಳ ಶಬ್ದ ಹುಟ್ಟಿ, ನೃಪಕಾಮ ರಾಜನಾಗಲು ಕಾರಣಿಭೂತವಾದ ಸ್ಥಳ ವಸಂತಿಕಾದೇವಿ ದೇವಸ್ಥಾನ.