ಭದ್ರಾವತಿ ಶಾಸಕ ಸಂಗಮೇಶ್ ಮಗನ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ರಾಜಣ್ಣ
ಸುದ್ದಿ ಮಾಧ್ಯಮಗಳು ಬಿತ್ತರಿಸಲು ಆಗದಂಥ ಕೆಟ್ಟ ಪದಗಳನ್ನು ಬಸವೇಶ್ ಬಳಸಿದ್ದಾನೆ. ಅಸಲಿಗೆ ಆಧಿಕಾರಿಯೊಬ್ಬರಿಗೆ ಫೋನ್ ಮಾಡಲು ಅವನು ಯಾರೂ ಅಲ್ಲ, ಅವನು ಶಾಸಕನ ಮಗನಾಗಿದ್ದರೆ ದರ್ಪ, ಎಗರಾಟ, ಗತ್ತು ಎಲ್ಲ ಅವನ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಬೇಕು. ಸರ್ಕಾರೀ ಅಧಿಕಾರಿಗಳಿಗೆ ಸಂಬಳ ನೀಡೋದು ಕರ್ನಾಟಕ ಸರ್ಕಾರ, ಬಿಕೆ ಸಂಗಮೇಶ್ ಅಲ್ಲ ಅನ್ನೋದನ್ನು ಬಸವೇಶ್ ಅರ್ಥಮಾಡಿಕೊಳ್ಳಬೇಕು.
ಬೆಂಗಳೂರು: ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ‘ಪುತ್ರರತ್ನ’ ಬಸವೇಶ್ ನಿನ್ನೆ ಭದ್ರಾವತಿಯ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರಿಗೆ ಕೆಟ್ಟ ಪದಗಳನ್ನು ಬಳಸಿ ಬೈದಾಡಿರುವ ಸಂಗತಿ ಕನ್ನಡಿಗರಿಗೆಲ್ಲ ಗೊತ್ತಿದೆ. ಒಂದು ಸುಸಂಸ್ಕೃತ ಕುಟುಂಬ ಯೋಚಿಸಲೂ ಸಾಧ್ಯವಿಲ್ಲದಂಥ ಕೆಟ್ಟ ಪದಗಳನ್ನು ಬಸವೇಶ್ ಅಧಿಕಾರಿಯ ವಿರುದ್ಧ ಬಳಸಿದ್ದಾನೆ. ಅವನು ಬಳಸಿದ ಭಾಷೆ ಮತ್ತು ಅಧಿಕಾರಿಯೊಂದಿಗೆ ನಡೆದುಕೊಂಡಿರುವ ರೀತಿಯನ್ನು ಸಹಕಾರ ಸಚಿವ ಕೆಎನ್ ರಾಜಣ್ಣ ತೀವ್ರವಾಗಿ ಖಂಡಿಸಿದ್ದಾರೆ. ಶಾಸಕನ ಮಗನಾಗಲೀ ಆಥವಾ ಮಂತ್ರಿಯ ಮಗ, ಹಾಗೆ ಮಾತಾಡಕೂಡದು, ಬಸವೇಶ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ರಾಜಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭದ್ರಾವತಿ ಕಬಡ್ಡಿ ಗಲಾಟೆ ಪ್ರಕರಣ: ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ಗೆ ಜಾಮೀನು