ರಾಮೇಶ್ವರಂ ಕೆಫೆ ಬ್ಲಾಸ್ಟ್; ಇತ್ತೀಚಿನ ಕೆಲ ವಿದ್ಯಮಾನಗಳು ಸರಣಿ ಬಾಂಬ್ ಸ್ಫೋಟಕ್ಕೆ ಪೂರ್ವಸಿದ್ಧತೆಯ ಶಂಕೆ ಮೂಡಿಸುತ್ತವೆ: ಸಿಟಿ ರವಿ

|

Updated on: Mar 02, 2024 | 1:26 PM

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 21 ಶಂಕಿತ ಭಯೋತ್ಪಾದಕರನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ ಎಂದು ಹೇಳಿದರು. ಹಿಂದೆ ಜೈನರ ಕಾಶಿ ಎಂದು ಕರೆಸಿಕೊಂಡಿದ್ದ ಭಟ್ಕಳ ಈಗ ಉಗ್ರರ ನೆಲೆಯಾಗಿದೆ. ಸಿಮಿ ಸಂಘಟನೆಯ ಮೇಲೆ ಎನ್ ಐಎ ದಾಳಿ ನಡೆಸಿದಾಗ ಘಜ್ವಾ-ಎ-ಹಿಂದ್ ಗೆ ಸಂಬಂಧಿಸಿದ ಕಾಗದಗಳು ಬರಾಮತ್ತಾಗಿದ್ದವು, ಇವೆಲ್ಲ ಸಂಗತಿಗಳನ್ನು ಗಮನಿಸಿದರೆ ಮತ್ತೊಂದು ಸರಣಿ ಬಾಂಬ್ ಸ್ಫೋಟಕ್ಕೆ ಪೂರ್ವ ಸಿದ್ಧತೆ ನಡೆದಿರುವ ಬಗ್ಗೆ ಅನುಮಾನ ಕಾಡದಿರದು ಎಂದು ರವಿ ಹೇಳಿದರು.

ಚಿಕ್ಕಮಗಳೂರು: ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟವನ್ನು (Rameshwaram café blast) ಗಮನಿಸಿದಾಗ ಹಿಂದೆ ತಮಿಳುನಾಡುನ ಕೊಯಂಬತ್ತೂರ್ ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ (serial bomb blast ) ಹಾಗೆ ಕರ್ನಾಟಕದಲ್ಲೂ ನಡೆಸಲು ಪೂರ್ವಭಾವಿ ಸಿದ್ಧತೆಯಂತೆ ಭಾಸವಾಗುತ್ತದೆ ಎಂದು ಹಿರಿಯ ಬಿಜೆಪಿ ನಾಯಕ ಸಿಟಿ ರವಿ (CT Ravi) ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು ಮತಾಂಧ ಶಕ್ತಿ ಮತ್ತು ಭಯೋತ್ಪಾದಕರು ಕೈಜೋಡಿಸಿರುವ ಬಲವಾದ ಶಂಕೆ ವ್ಯಕ್ತವಾಗುತ್ತಿದೆ ಯಾಕೆಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 21 ಶಂಕಿತ ಭಯೋತ್ಪಾದಕರನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ ಎಂದು ಹೇಳಿದರು. ಹಿಂದೆ ಜೈನರ ಕಾಶಿ ಎಂದು ಕರೆಸಿಕೊಂಡಿದ್ದ ಭಟ್ಕಳ ಈಗ ಉಗ್ರರ ನೆಲೆಯಾಗಿದೆ. ಸಿಮಿ ಸಂಘಟನೆಯ ಮೇಲೆ ಎನ್ ಐಎ ದಾಳಿ ನಡೆಸಿದಾಗ ಘಜ್ವಾ-ಎ-ಹಿಂದ್ ಗೆ ಸಂಬಂಧಿಸಿದ ಕಾಗದಗಳು ಬರಾಮತ್ತಾಗಿದ್ದವು, ಇವೆಲ್ಲ ಸಂಗತಿಗಳನ್ನು ಗಮನಿಸಿದರೆ ಮತ್ತೊಂದು ಸರಣಿ ಬಾಂಬ್ ಸ್ಫೋಟಕ್ಕೆ ಪೂರ್ವ ಸಿದ್ಧತೆ ನಡೆದಿರುವ ಬಗ್ಗೆ ಅನುಮಾನ ಕಾಡದಿರದು ಎಂದು ರವಿ ಹೇಳಿದರು.

ಬಾಂಬ್ ಸ್ಫೋಟದ ವಿಷಯದಲ್ಲಿ ರಾಜಕೀಯ ಬೇಡ ಅಂತ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ, ಅವರ ಮಾತು ಸರಿ, ಇದು ಜನರ ಸಂರಕ್ಷಣೆಯ ವಿಷಯವಾಗಿರುವುದರಿಂದ ರಾಜಕೀಯ ಮಾಡೋದು ಸರಿಯಲ್ಲ, ಆದರೆ ಮುಖ್ಯಮಂತ್ರಿಯವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಇಟ್ಟಿಕೊಳ್ಳುವುದು ಬೇಡ ಅಂತಲೂ ಹೇಳಲಿ, ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಕೋರರನ್ನ ಡಿಕೆ ಶಿವಕುಮಾರ್ ಬ್ರದರ್ಸ್ ಅನ್ನುತ್ತಾರೆ ಎಂದು ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕುಂಕುಮ ಬೇಡ ಎನ್ನುವ ಇವರು ಹಿಂದೂನಾ? ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಶಾಸಕ ಸಿಟಿ ರವಿ ಕಿಡಿ