ದಾಖಲೆ ಮಳೆ, ಉಕ್ಕಿ ಹರಿಯುತ್ತಿರುವ ಬುಡಮೇರು ನದಿ; ವಿಜಯವಾಡ ನಗರ ಶೇಕಡ 40ರಷ್ಟು ಜಲಾವೃತ!

ದಾಖಲೆ ಮಳೆ, ಉಕ್ಕಿ ಹರಿಯುತ್ತಿರುವ ಬುಡಮೇರು ನದಿ; ವಿಜಯವಾಡ ನಗರ ಶೇಕಡ 40ರಷ್ಟು ಜಲಾವೃತ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 02, 2024 | 11:38 AM

ದ್ರೋಣ್ ಕೆಮೆರಾ ಮೂಲಕ ಸೆರೆಹಿಡಿದಿರುವ ದೃಶ್ಯ ಭಯಾನಕವಾಗಿದೆ. ವಿಜಯವಾಡ ರಸ್ತೆ, ಬೀದಿಗಳೆಲೆಲ್ಲ ನೀರು! ಚಿಕ್ಕಪುಟ್ಟ ಮನೆಗಳು ಹೆಚ್ಚು ಕಡಿಮೆ ಮುಳಗಡೆಯಾಗಿವೆ, ಬಹು ಅಂತಸ್ತಿನ ಮನೆಗಳು ಮಾತ್ರ ಕಾಣಿಸುತ್ತಿವೆ. ನೀರು ಸಂಪೂರ್ಣವಾಗಿ ಇಂಗಿ ನಗರ ಮೊದಲ ಸ್ಥಿತಿಗೆ ಬರಲು 2 ದಿನಗಳಾದರೂ ಬೇಕು.

ವಿಜಯವಾಡ (ಆಂಧ್ರ ಪ್ರದೇಶ): ರವಿವಾರದಂದು ಸಾಯಂಕಾಲದವರೆಗೆ ಆಂಧ್ರ ಪ್ರದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ ವಿಜಯವಾಡದಲ್ಲಿ ಕಳೆದ ಮೂರು ದಶಕಗಳಲ್ಲೇ ಅತ್ಯಧಿಕ ಮಳೆ ಅಂದರೆ 29ಸೆಂಮೀ ನಷ್ಟು ಮಳೆಯಾಯಿತು.ಮಳೆಯ ಪ್ರತಾಪ ಅಷ್ಟಕ್ಕೆ ನಿಲ್ಲದೆ ರಾತ್ರಿಯಿಡಡಿ ಸುರಿದ ಕಾರಣ ಒಂದೇ ದಿನ ಮಳೆಯ ಪ್ರಮಾಣ 37 ಸೆಂಮೀ ತಲುಪಿತು. ಹಾಗಾಗಿ, ಬುಡಮೇರು ನದಿ ಉಕ್ಕಿ ಹರಿಯಲಾರಂಭಿಸಿದೆ ಮತ್ತು ನಗರದ ಶೇಕಡ 40 ರಷ್ಟು ಭಾಗ ಜಲಾವೃತಗೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಭಾರೀ ಮಳೆ ಕೊಂಕಣ ರೈಲ್ವೆ ಸೇವೆ ಸ್ಥಗಿತ; ಮಂಗಳೂರು ಎಕ್ಸ್‌ಪ್ರೆಸ್, ಮತ್ಸ್ಯ ಗಂಧ ರೈಲು ಸಂಚಾರ ಬಂದ್