ಭಾರೀ ಮಳೆ ಕೊಂಕಣ ರೈಲ್ವೆ ಸೇವೆ ಸ್ಥಗಿತ; ಮಂಗಳೂರು ಎಕ್ಸ್‌ಪ್ರೆಸ್, ಮತ್ಸ್ಯ ಗಂಧ ರೈಲು ಸಂಚಾರ ಬಂದ್
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ಸೇರಿದಂತೆ ಕೊಂಕಣದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು 14 ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿದೆ. ಕರಾವಳಿ ಭಾಗದ 12134 ಸೂಪರ್ ಎಕ್ಸ್‌ಪ್ರೆಸ್ ಛತ್ರಪತಿ ಶಿವಾಜಿ ಮುಂಬೈ ಟರ್ಮಿನಲ್ ರೈಲು ಕ್ಯಾನ್ಸಲ್ ಆಗಿದೆ. 12620 ಮತ್ಸ್ಯ ಗಂಧ ಮಂಗಳೂರು ಟು ಮುಂಬೈ ರೈಲು ಕ್ಯಾನ್ಸಲ್ ಆಗಿದೆ.
ಉಡುಪಿ, ಜುಲೈ.15: ಇತ್ತೀಚೆಗಷ್ಟೇ ಗೋವಾದ ಕೊಂಕಣ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದು ಜುಲೈ 10ರಂದು ಹಲವು ರೈಲುಗಳ ಸಂಚಾರ ವ್ಯತ್ಯಯವಾಗಿತ್ತು. ಇದೀಗ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ಸೇರಿದಂತೆ ಕೊಂಕಣದ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದ ಸಮಸ್ಯೆಗಳು ಎದುರಾಗಿದ್ದು 14 ಗಂಟೆಗಳ ಕಾಲ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಕರ್ನಾಟಕ ರಾಜ್ಯದ ರೈಲು ಪ್ರಯಾಣಿಕರಿಗೂ ಸಮಸ್ಯೆ ಎದುರಾಗಿದೆ.
ಮಂಗಳೂರು ಎಕ್ಸ್‌ಪ್ರೆಸ್, ಕೊಂಕಣ ಕನ್ಯಾ ಎಕ್ಸ್‌ಪ್ರೆಸ್, ತುಟಾರಿ ಎಕ್ಸ್‌ಪ್ರೆಸ್, ಜನಶತಾಬ್ದಿ ಎಕ್ಸ್‌ಪ್ರೆಸ್, ದಿವಾ ಸಾವಂತವಾಡಿ ಎಕ್ಸ್‌ಪ್ರೆಸ್, ಸಾವಂತವಾಡಿ ಮಡಗಾಂವ್ ಪ್ಯಾಸೆಂಜರ್ ರೈಲು ಸೇವೆ ನಿಂತಿದೆ. ಇನ್ನು ಕರಾವಳಿ ಭಾಗದ 12134 ಸೂಪರ್ ಎಕ್ಸ್‌ಪ್ರೆಸ್ ಛತ್ರಪತಿ ಶಿವಾಜಿ ಮುಂಬೈ ಟರ್ಮಿನಲ್ ರೈಲು ಕ್ಯಾನ್ಸಲ್ ಆಗಿದೆ. 12620 ಮತ್ಸ್ಯ ಗಂಧ ಮಂಗಳೂರು ಟು ಮುಂಬೈ ರೈಲು ಕ್ಯಾನ್ಸಲ್ ಆಗಿದೆ.
ಇದನ್ನೂ ಓದಿ: ಕೊಡಗು ಜಿಲ್ಲೆಯಾದ್ಯಂತ ಮುಂದುವರಿದ ಮಳೆ, ಯೆಲ್ಲೋ ಅಲರ್ಟ್ ಘೋಷಣೆ, ಶಾಲೆಗಳಿಗೆ ರಜೆ
ಬೋಗ್ದ್ಯಾದಲ್ಲಿ ಹಳಿಗಳ ಮೇಲೆ ಗುಡ್ಡ ಕುಸಿದ ಪರಿಣಾಮ ರೈಲು ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲೇ ರಾತ್ರಿ ಕಳೆಯುವಂತಾಗಿತ್ತು. ನೂರಾರು ಪ್ರಯಾಣಿಕರು ಕೊಂಕಣ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದಾರೆ. ಮುಂದಿನ ನಾಲ್ಕು ದಿನ ಕೊಂಕಣ ಸೇರಿದಂತೆ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಸತಾರಾ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಪುಣೆ, ನಾಗ್ಪುರ, ರಾಯಗಢ, ಗಡ್ಚಿರೋಲಿ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜುಲೈ 18ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಕೊಂಕಣ, ಮಧ್ಯ ಮಹಾರಾಷ್ಟ್ರ ಘಟಮತ್ಯವಾರದಲ್ಲಿ ರೆಡ್ ಅಲರ್ಟ್ ನೀಡಲಾಗಿದೆ. ವಿದರ್ಭದಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ. ಇದರಿಂದಾಗಿ ಘಾಟ್ ಪ್ರವಾಸೋದ್ಯಮಕ್ಕೆ ಭೇಟಿ ನೀಡುವಾಗ ಜಾಗರೂಕರಾಗಿರಿ ಎಂದು ಹವಾಮಾನ ಇಲಾಖೆ ಮನವಿ ಮಾಡಿದೆ.
ಮಳೆಗೆ ಮುಂಬೈ-ಪುಣೆ ಹೆದ್ದಾರಿ ಭಾರೀ ಮಳೆಗೆ ಮುಳುಗಿ ಹೋಗಿದೆ. ಈ ಹೆದ್ದಾರಿಯಲ್ಲಿ ಕಾರು-ಬೈಕ್ಗಳು ಥೇಟ್ ಬೋಟ್ಗಳಂತೆ ನಿಂತ ನೀರಿನಲ್ಲೇ ಓಡಾಡ್ತಿವೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ರು ಪ್ರವಾಹಕ್ಕೆ ಸಿಲುಕಿಕೊಂಡಿದ್ರು. ರಕ್ಷಣಾ ಸಿಬ್ಬಂದಿ ಆತನನ್ನ ಬಚಾವ್ ಮಾಡುವಲ್ಲಿ ಯಶಸ್ವಿಯಾದ್ರು. ಅದೇ ರೀತಿ, ಖೇಡ್ ಪ್ರದೇಶದಲ್ಲಿ ಕೂಡ ಓರ್ವ ಮಹಿಳೆಯ ರಕ್ಷಣೆ ಮಾಡಲಾಯ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:23 pm, Mon, 15 July 24