Relationship: ನಿಮ್ಮನ್ನು ಇಷ್ಟಪಡುವ ಸಂಗಾತಿ ಸಿಗುತ್ತಿಲ್ಲ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಇದನ್ನು ಓದಿ

| Updated By: shivaprasad.hs

Updated on: Apr 29, 2022 | 9:48 AM

How to Find Love: ಬಹುತೇಕರಿಗೆ ತಮ್ಮ ಸಂಗಾತಿಯನ್ನು ಅರಸುವುದು ಹೇಗೆ? ಅಥವಾ ತಮಗೆ ಒಪ್ಪುವ ಸಂಗಾತಿಯನ್ನು ಹುಡುಕಿಕೊಳ್ಳುವುದು ಹೇಗೆ ಎಂಬ ಬಗ್ಗೆ ಪ್ರಶ್ನೆಗಳಿರುತ್ತವೆ. ಇದಕ್ಕೆ ಮನೋವೈದ್ಯೆ ಡಾ.ಸೌಜನ್ಯಾ ವಸಿಷ್ಠ ಉತ್ತರಿಸಿದ್ದಾರೆ.

ಬಹುತೇಕರಿಗೆ ತಮ್ಮ ಸಂಗಾತಿಯ (Partner) ಬಗ್ಗೆ ಹಲವು ಕಲ್ಪನೆಗಳಿರುತ್ತವೆ. ಆದರೆ ತಮಗೆ ತಕ್ಕ ಸಂಗಾತಿ ಸಿಗುತ್ತಿಲ್ಲ ಎಂಬ ಕೊರಗು ಬಹುತೇಕರಿಗೆ ಇರುತ್ತದೆ. ಅಥವಾ ತಾವು ಪ್ರೀತಿ (Love) ವಂಚಿತರು ಎಂದೂ ಹಲವರು ಯೋಚಿಸುತ್ತಿರುತ್ತಾರೆ. ಈ ಬಗ್ಗೆ ಮನೋವೈದ್ಯೆ ಡಾ.ಸೌಜನ್ಯಾ ವಸಿಷ್ಠ ವಿವರಿಸಿದ್ದಾರೆ. ಅವರು ಹೇಳುವಂತೆ, ಮೊದಲು ನಿಮ್ಮನ್ನು ನೀವು ಸಂತೋಷವನ್ನು ಕಂಡುಕೊಳ್ಳಬೇಕು. ‘‘ನಮ್ಮ ಬಗ್ಗೆ ನಮಗೆ ಕೊರಗು, ಹಿಂಜರಿಕೆ ಇರಬಾರದು. ನಮ್ಮ ಬಗ್ಗೆ ನಮಗೆ ಗೌರವವಿರಬೇಕು. ನಾವು ನಮ್ಮ ಸಂಗಾತಿಯಿಂದ ಸಂತೋಷವನ್ನು ಹುಡುಕಬಾರದು. ನಮ್ಮಿಂದ ನಾವು ಸಂತೋಷವಾಗಿರಬೇಕು’’ ಎನ್ನುತ್ತಾರೆ.

‘‘ಸಂಗಾತಿಗಳು ಹಣ, ಹೆಸರು ಇರುವವರಿಗೆ ಒಲಿಯುತ್ತಾರೆ ಎಂದು ಯೋಚಿಸಬೇಡಿ. ಬದಲಾಗಿ ನಾವು ಪ್ರೀತಿಗೆ ಅರ್ಹರು ಎಂದು ಯೋಚಿಸಿ. ನಿಜವಾಗಲೂ ಪ್ರೀತಿ ಬಯಸುವವರಿಗೆ ಹಣ, ಹೆಸರು ಮುಖ್ಯವಾಗುವುದಿಲ್ಲ. ಹಾಗೆಯೇ ನಾವು ನಮ್ಮ ಕೆಲಸಗಳ ಬಗ್ಗೆ ಗಮನಹರಿಸಿ ಅದರಲ್ಲಿ ಮುಂದುವರೆಯಬೇಕು. ಬೇರೆಯರವರಿಂದ ಯಾವಾಗಲೂ ಪ್ರೀತಿಯನ್ನು ಅಪೇಕ್ಷಿಸಬಾರದು. ನಮ್ಮನ್ನೇ ನಾವು ಸಂತೋಷವಾಗಿಟ್ಟುಕೊಳ್ಳಬೇಕು’’ ಎನ್ನುತ್ತಾರೆ ಡಾ.ಸೌಜನ್ಯಾ.

‘‘ಪ್ರೀತಿ ಕೊಡು, ಸಮಯ ಕೊಡು.. ಹೀಗೆ ಬೇರೆಯವರಲ್ಲಿ ಕೇಳಬಾರದು. ಬದಲಾಗಿ ನಾವು ನಮ್ಮ ಸಾಧನೆಯಲ್ಲಿ ಗಮನಹರಿಸಬೇಕು. ಆಗ ಅದನ್ನು ನೋಡಿದವರು ನಮ್ಮ ಸಾಧನೆಯಲ್ಲಿ ಅವರೂ ಭಾಗಿದಾರರಾಗಲು ಆಸೆ ಪಡುತ್ತಾರೆ. ಆದ್ದರಿಂದ ಪ್ರೀತಿಯನ್ನು ಹುಡುಕಿಕೊಂಡು ಹೋಗಬೇಡಿ. ನೀವು ಪರಿಪೂರ್ಣರಾಗಿದ್ದರೆ, ನೀವು ಖುಷಿಯಾಗಿದ್ದರೆ ಪ್ರೀತಿ ನಿಮ್ಮನ್ನು ಅರಸಿ ಬರುತ್ತದೆ’’ ಎಂದು ಹೇಳುತ್ತಾರೆ ಡಾ.ಸೌಜನ್ಯಾ ವಸಿಷ್ಠ.

ಇದನ್ನೂ ಓದಿ: Health Tips: ಪದೇ ಪದೇ ಆತಂಕಕ್ಕೆ ಒಳಗಾಗುತ್ತೀರಾ? ಅದರಿಂದ ಹೊರಬರೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

Lifestyle: ನಮಗಾಗಿ ನಾವು ಬದುಕೋದು ಹೇಗೆ? ಉತ್ತಮ ಜೀವನಕ್ಕಾಗಿ ಈ ಸರಳ ಸೂತ್ರಗಳನ್ನು ಪಾಲಿಸಿ