ಕೊನೆಗೂ ಮಂಗನಾಟಕ್ಕೆ ಬಿತ್ತು ಬ್ರೇಕ್: ಇಡೀ ಊರನ್ನೇ ಭಯಭೀತಿಗೊಳಿಸಿದ್ದ ಕೋತಿ ಲಾಕ್

Edited By:

Updated on: Sep 14, 2025 | 5:14 PM

30ಕ್ಕೂ ಹೆಚ್ಚು ಜನರಿಗೆ ಕಚ್ಚಿ ಇಡೀ ಊರನ್ನೇ ಭಯಭೀತಿಗೊಳಿಸಿದ್ದ ಮಂಗನನ್ನು ಕೊನೆಗೂ ಸೆರೆಹಿಡಿಯಲಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಹುಚ್ಚು ಮಂಗವೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಪರಾರಿಯಾಗುತ್ತಿತ್ತು. ಹೀಗೆ ಊರಲ್ಲಿ ಸುಮಾರು 30ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ರೋಸಿ ಹೋಗಿದ್ದು, ಮನೆಬಿಟ್ಟು ಬರಲು ಭಯಗೊಂಡಿದ್ದರು. ಇನ್ನು ಮಂಗನ ಹುಚ್ಛಾಟ ಹೆಚ್ಚಾಗುತ್ತಿದ್ದಂತೆಯೇ ಗ್ರಾಮ ಪಂಚಾಯಿತಿ ವತಿಯಂದ ಸ್ಕೀಕರ್ ಮೂಲಕ ಜಾಗೃತಿ ಮೂಡಿಸಲಾಗಿತ್ತು. ಇದೀಗ ಕೊನೆಗೆ ಗ್ರಾಮಸ್ಥರು ಸೇರಿಕೊಂಡು ಕೋತಿಯನ್ನು ಸರೆಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಬಾಗಲಕೋಟೆ, (ಸೆಪ್ಟೆಂಬರ್ 14): 30ಕ್ಕೂ ಹೆಚ್ಚು ಜನರಿಗೆ ಕಚ್ಚಿ ಇಡೀ ಊರನ್ನೇ ಭಯಭೀತಿಗೊಳಿಸಿದ್ದ ಮಂಗನನ್ನು ಕೊನೆಗೂ ಸೆರೆಹಿಡಿಯಲಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಹುಚ್ಚು ಮಂಗವೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಪರಾರಿಯಾಗುತ್ತಿತ್ತು. ಹೀಗೆ ಊರಲ್ಲಿ ಸುಮಾರು 30ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ರೋಸಿ ಹೋಗಿದ್ದು, ಮನೆಬಿಟ್ಟು ಬರಲು ಭಯಗೊಂಡಿದ್ದರು. ಇನ್ನು ಮಂಗನ ಹುಚ್ಛಾಟ ಹೆಚ್ಚಾಗುತ್ತಿದ್ದಂತೆಯೇ ಗ್ರಾಮ ಪಂಚಾಯಿತಿ ವತಿಯಂದ ಸ್ಕೀಕರ್ ಮೂಲಕ ಜಾಗೃತಿ ಮೂಡಿಸಲಾಗಿತ್ತು. ಇದೀಗ ಕೊನೆಗೆ ಗ್ರಾಮಸ್ಥರು ಸೇರಿಕೊಂಡು ಕೋತಿಯನ್ನು ಸರೆಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.