ಯತ್ನಾಳ್ ತಂಡದ ಹೆಸರು ಹೇಳಲು ತಯಾರಿಲ್ಲದ ವಿಜಯೇಂದ್ರ ತಮ್ಮ ಪಕ್ಷದವರನ್ನೇ ಕೆಲವರು ಎನ್ನುತ್ತಾರೆ!

|

Updated on: Dec 04, 2024 | 2:38 PM

ವಿಜಯೇಂದ್ರ, ಡಾ ಸಿಎನ್ ಅಶ್ವಥ್ ನಾರಾಯಣ, ಬಸವರಾಜ್ ಭೈರತಿ ಅವರನ್ನೊಳಗೊಂಡ ತಂಡ ಈ ಭಾಗದಲ್ಲಿ ಹೋರಾಟ ಮಾಡುವುದು ಬೇಕಿರಲಿಲ್ಲ, ಅವರು ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಮಾಡಿದ್ದರೆ ಅವರ ಹೋರಾಟಕ್ಕೆ ಬೆಲೆ ಬರುತಿತ್ತು. ಒಂದೇ ಕಾರಣಕ್ಕಾಗಿ ಒಂದೇ ಪಕ್ಷದ ಎರಡು ತಂಡಗಳು ಪ್ರತ್ಯೇಕವಾಗಿ ಹೋರಾಟ ಮಾಡೋದು ರೈತರಿಗೆ ಹಾಸ್ಯಾಸ್ಪದ ಅನಿಸುತ್ತಿದೆ.

ಬೀದರ್: ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ರೈತರ ಪರವಾಗಿ ಮತ್ತು ವಕ್ಫ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ತಂಡ ಹೋರಾಟ ಮಾಡಿದ್ದಾಗ್ಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಮ್ಮ ಬಣದ ಸದಸ್ಯರೊಂದಿಗೆ ಇಂದು ಬೀದರ್ ಜಿಲ್ಲೆಯಲ್ಲಿ ಹೋರಾಟ ಆರಂಭಿಸಿದ್ದಾರೆ. ನಗರದ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಜಯೇಂದ್ರ, ಕೆಲವರು ಈ ಭಾಗದಲ್ಲಿ ರೈತರ ಪರ ಹೋರಾಟ ನಡೆಸಿದ್ದಾರೆ, ರೈತ ಪರವಾಗಿ ಯಾರೇ ಹೋರಾಟ ನಡೆಸಿದರೂ ಸ್ವಾಗತಿಸುತ್ತೇವೆ ಅನ್ನುತ್ತಾರೆ. ತಮ್ಮ ಪಕ್ಷದವರನ್ನೇ ಅವರು ಕೆಲವರು ಅನ್ನೋದು ಆಶ್ಚರ್ಯ ಮೂಡಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹೋರಾಟ ಮಾಡಲು ವಿಜಯೇಂದ್ರಗೆ ಏನೂ ಉಳಿದಿಲ್ಲ, ನಾವು ಈಗಾಗಲೇ ವರದಿ ಕೂಡ ಸಲ್ಲಿಸಿದ್ದೇವೆ: ಯತ್ನಾಳ್