ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ಫೆಂಗಲ್ ಚಂಡಮಾರುತದ ಪ್ರಭಾವ ಟೊಮೆಟೋ ಬೆಳೆಯ ಮೇಲೂ ಆಗಿದೆ. ಬೆಳೆ ನಾಶ, ರೋಗದ ಪರಿಣಾಮ ಟೊಮೆಟೊ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಟೊಮೆಟೊ ಕಾಯಿಯನ್ನೇ ಮಾರಾಟ ಮಾಡಲಾಗುತ್ತಿದೆ. ದರವೂ ದುಬಾರಿಯಾಗಿದೆ. ವಿವರ ಇಲ್ಲಿದೆ.
ಚಿಕ್ಕಬಳ್ಳಾಪುರ, ಡಿಸೆಂಬರ್ 4: ಫೆಂಗಲ್ ಚಂಡಮಾರುತದಿಂದ ಟೊಮೆಟೋಗೆ ಭಾರಿ ಬೇಡಿಕೆ ಬಂದಿದ್ದು, ಬೆಳೆ ಕೊರತೆಯಾಗಿದೆ. ಜಿಟಿಜಿಟಿ ಮಳೆ ಹಾಗೂ ತಂಪಾದ ಹವಾಮಾನದಿಂದಾಗಿ ತೋಟದಲ್ಲಿ ಟೊಮೆಟೋ ಕಾಯಿ ಆಗಿದ್ದರೂ ಹಣ್ಣಾಗುತ್ತಿಲ್ಲ. ರೈತರು ಕಾಯಿಯನ್ನೇ ಕಟಾವು ಮಾಡಿ ಮಾರುಕಟ್ಟೆಗೆ ಬಿಡುತ್ತಿದ್ದು, ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಹಣ್ಣುಗಳ ಬದಲು ಕಾಯಿ ಮಾರಾಟ ಮಾಡಲಾಗುತ್ತಿದೆ. 14 ಕೆಜಿ ಬಾಕ್ಸ್ ಸಗಟು ಮಾರಾಟ (ಹೋಲ್ಸೇಲ್) ದರ 800 ರೂಪಾಯಿ ಆಗಿದೆ. ಹೆಚ್ಚಿನ ವಿವರ ವಿಡಿಯೋದಲ್ಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos