ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್; ಬಂಧಿತರ ಸಂಖ್ಯೆ 19ಕ್ಕೆ ಏರಿಕೆ

|

Updated on: Jun 17, 2024 | 6:56 AM

ಶೆಡ್​​ನಲ್ಲಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್​ ನೀಡೋ ಪ್ಲ್ಯಾನ್​​ ಮಾಡಲಾಗಿದೆ. ಮೆಗ್ಗರ್ ಮಷಿನ್ ಬಳಸಿ ಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿದೆ. ಪ್ರಕರಣ ಬಯಲಾಗುತ್ತಿದ್ದಂತೆ ರಾಜು ತಲೆಮರಿಸಿಕೊಂಡಿದ್ದ. ಈತ ಮಂಡ್ಯ ಮೂಲದವನಾಗಿದ್ದು, ಪ್ರಕರಣದಲ್ಲಿ 9ನೇ ಆರೋಪಿಯಾಗಿ ಮಾಡಲಾಗಿದೆ.

ರೇಣುಕಾ ಸ್ವಾಮಿ (Renuka Swami) ಮರಣೋತ್ತರ ಪರೀಕ್ಷೆಯ ವರದಿ ನಿಜಕ್ಕೂ ಶಾಕಿಂಗ್ ಆಗಿತ್ತು. ರೇಣುಕಾ ಸ್ವಾಮಿ ಅನುಭವಿಸಿದ ಚಿತ್ರ ಹಿಂಸೆಯ ವಿವರ ಈ ವರದಿಯಲ್ಲಿ ಇತ್ತು. ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೂಡ ನೀಡಲಾಗಿತ್ತು. ಇದರ ಮಾಸ್ಟರ್​ಮೈಂಡ್ ರಾಜು ಅಲಿಯಾಸ್ ಧನರಾಜ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಾಮಿ ಕೊಲೆ ಪ್ರಕರಣದಲ್ಲಿ ಈವರೆಗೆ 19 ಆರೋಪಿಗಳ ಬಂಧನ ಆಗಿದೆ. A5 ಆರೋಪಿ ನಂದೀಶ್ ಜೊತೆ ಬೆಂಗಳೂರಲ್ಲಿ ರಾಜು ಕೇಬಲ್ ಕೆಲಸ ಮಾಡುತ್ತಿದ್ದ. ಎಲೆಕ್ಟ್ರಿಕಲ್ ಮೆಗ್ಗರ್ ಬಗ್ಗೆ ನಂದೀಶ್, ರಾಜು ತಿಳಿದುಕೊಂಡಿದ್ದರು. ಘಟನೆಯ ದಿನ ರಾಜುನ ನಂದೀಶ್​​ ಶೆಡ್​ಗೆ ಕರೆಸಿಕೊಂಡಿದ್ದ. ಜೊತೆಗೆ ಎಲೆಕ್ಟ್ರಿಕಲ್ ಮೆಗ್ಗರ್ ಮಷಿನ್ ಕೂಡ ತರಿಸಿಕೊಳ್ಳಲಾಗಿದೆ. ಶೆಡ್​​ನಲ್ಲಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್​ ನೀಡೋ ಪ್ಲ್ಯಾನ್​​ ಮಾಡಲಾಗಿದೆ. ಮೆಗ್ಗರ್ ಮಷಿನ್ ಬಳಸಿ ಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿದೆ. ಪ್ರಕರಣ ಬಯಲಾಗುತ್ತಿದ್ದಂತೆ ರಾಜು ತಲೆಮರಿಸಿಕೊಂಡಿದ್ದ. ಈತ ಮಂಡ್ಯ ಮೂಲದವನಾಗಿದ್ದು, ಪ್ರಕರಣದಲ್ಲಿ 9ನೇ ಆರೋಪಿಯಾಗಿ ಮಾಡಲಾಗಿದೆ. ವಿಚಾರಣೆ ವೇಳೆ‌ ರಾಜು ಸಂಪೂರ್ಣ ವಿಚಾರ ಬಾಯ್ಬಿಟ್ಟಿದ್ದಾರೆ. ಪೊಲೀಸರು ಎಲೆಕ್ಟ್ರಿಕಲ್ ಮೆಗ್ಗರ್ ಮಷಿನ್‌ ಕೂಡಾ ವಶಕ್ಕೆ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on