ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?

Updated on: Jun 16, 2024 | 2:47 PM

ಸುಮಾರು ಹತ್ತು ವರ್ಷಗಳಿಂದ ಇದೇ ಮನೆಯಲ್ಲಿ ಪವಿತ್ರಾ ಗೌಡ ವಾಸವಾಗಿದ್ದಾಳೆ. 2 ಫ್ಲೋರ್​ ಇರುವ ಈ ಡುಪ್ಲೆಕ್ಸ್ ಮನೆಯ ಕೆಳಗಡೆ ಪಾರ್ಕಿಂಗ್​ಗೆ ಜಾಗ ಇದೆ ಮತ್ತುಇನ್ನೋರ್ವ ಆರೋಪಿ ಪವನ್ ವಾಸವಾಗಿದ್ದ ಮನೆ ಇದೆ. ನೊರೆಹೊರೆಯವರ ಜತೆಗೆ ಪವಿತ್ರಾ ಗೌಡಗೆ ಸಂಪರ್ಕವೇ ಇರಲಿಲ್ಲ. ಈಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದಾಳೆ.

ನಟಿ ಪವಿತ್ರಾ ಗೌಡ, ನಟ ದರ್ಶನ್​ ಸೇರಿದಂತೆ ಅನೇಕರು ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಎಲ್ಲರ ಪೊಲೀಸ್​ ಕಸ್ಟಡಿ ಮುಂದುವರಿದಿದೆ. ಇಂದು (ಜೂನ್​ 16) ಬೆಂಗಳೂರಿನ ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರು ಮಹಜರು ಮಾಡಿದ್ದಾರೆ. ಸುಮಾರು 10 ವರ್ಷದಿಂದ ಇದೇ ಮನೆಯಲ್ಲಿ ಪವಿತ್ರಾ ಗೌಡ (Pavithra Gowda) ವಾಸವಾಗಿದ್ದಾಳೆ. ಇದು ಮೂರು ಫ್ಲೋರ್​ನ ಡುಪ್ಲೆಕ್ಸ್ ಮನೆ. ಕೆಳಗಡೆ ಪಾರ್ಕಿಂಗ್​ಗೆ ಜಾಗ ಹಾಗೂ ಇನ್ನೋರ್ವ ಆರೋಪಿ ಪವನ್ ಇರುತ್ತಿದ್ದ ಮನೆ ಇದೆ. ಈತ ಪವಿತ್ರಾ ಗೌಡಗೆ ಮನೆ‌ ಕೆಲಸಗಾರ ಹಾಗೂ ನಾಯಿಯನ್ನ ನೋಡಿಕೊಳ್ಳುತ್ತಿದ್ದ. ಅಕ್ಕಪಕ್ಕ ಮನೆಯವರ ಜೊತೆಗೆ ಪವಿತ್ರಾಗೆ ಸಂಪರ್ಕವೇ ಇರಲಿಲ್ಲ. ಪವಿತ್ರಾ ಫೋಕ್ಸ್​ ವ್ಯಾಗನ್ ಹಾಗೂ ರೇಂಜ್ ರೋವರ್​ನಲ್ಲಿ ಓಡಾಡುತ್ತಿದ್ದಳು. ಪವಿತ್ರಾ ಗೌಡ ಮಗಳು ಹಾಸ್ಟೆಲ್​ನಲ್ಲಿ ಇದ್ದಳು. ಆಗಾಗ ಇಲ್ಲಿಗೆ ಬರುತ್ತಿದ್ದಳು. ಮೊದಮೊದಲು ದರ್ಶನ್ (Darshan) ಈ ಮನೆಗೆ ಬರೋದನ್ನ ನೋಡಿ ಇಲ್ಲಿ ವಿಜಯಲಕ್ಷಿ ಇದ್ದಾರೆ ಅಂತ ಅಕ್ಕಪಕ್ಕದ ಮನೆಯವರು ಅಂದುಕೊಂಡಿದ್ದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹೊಸ ಹೊಸ ವಿಚಾರಗಳು ಒಂದೊಂದಾಗಿಯೇ ಹೊರಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More